ವಾಲ್ಪಾಡಿ ಗ್ರಾಮೋತ್ಸವ ಮತ್ತು ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಾಣಿಶ್ರೀ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಮುಖಂಡ ಅಶ್ವಥ್ ಕೆ.ಪಣಪಿಲ, ಶಿರ್ತಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಫ್ರೆಡ್ರಿಕ್ ಪಿಂಟೊ, ಉದ್ಯಮಿ ನಾಗೇಶ್ ಬಂಗೇರ, ಗ್ರಾ.ಪಂ.ಮಾಜಿ ಸದಸ್ಯರಾದ ಅರುಣ್ ಕುಮಾರ್ ಶೆಟ್ಟಿ, ಶ್ರೀಧರ ಬಂಗೇರ, ಉದ್ಯಮಿ ಶರೀಫ್ ಎಂ.ಎಂ, ಸಮಾಜ ಸೇವಕ ಅಬೂಬಕ್ಕರ್ ಶಿರ್ತಾಡಿ, ವಸಂತ ಪಂಚಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಐದನೇ ತರಗತಿ ವಿದ್ಯಾರ್ಥಿಗಳಾದ ಅನಾಝ್, ಅಭಿಲಾಷ್, ತೇಜಸ್,ಯಶ್ವಿತ್, ಶ್ರೇಯಸ್,ಹಕೀಮ್ ಹಾಗೂ ಶಾಝಿನ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಗ್ರಾಮೋತ್ಸವ ಸಮಿತಿಯ ಅಧ್ಯಕ್ಷ ಆನಂದ, ಜನಾರ್ಧನ, ಮೋಹಿನಿ, ಶೇಖರ್, ಇರ್ಷಾದ್, ಶಿವರಾಮ, ಅಖಿಲೇಶ್,ಸುಕುಮಾರ್,ಗೋಪಾಲ , ಎಸ್ಡಿಎಂಸಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎಸ್ಡಿಎಂಸಿ ಅಧ್ಯಕ್ಷ ಅಶ್ರಫ್ ವಾಲ್ಪಾಡಿ ಸ್ವಾಗತಿಸಿದರು. ಗಣೇಶ್ ಬಿ.ಅಳಿಯೂರು ಹಾಗೂ ಸಹಶಿಕ್ಷಕಿ ರಶ್ಮಿ ಎಂ.ಎಸ್.ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಅಂಗನವಾಡಿ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗಣೇಶ್ ಬಿ.ಅಳಿಯೂರು ಅವರ ಸಾರಥ್ಯದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ' ಅಗೆಲ್ ' ಎಂಬ ನಾಟಕ ನಡೆಯಿತು.