ಆಳ್ವಾಸ್ ಪತ್ರಿಕೋದ್ಯಮ ಹಿರಿಯ ವಿದ್ಯಾರ್ಥಿಗಳ ಸಂಘದ ಅಸ್ತಿತ್ವಕ್ಕೆ: ಪ್ರಥಮ ಅಧ್ಯಕ್ಷರಾಗಿ ಪ್ರಕಾಶ್ ಡಿ.ರಾಂಪುರ್

ಆಳ್ವಾಸ್ ಪತ್ರಿಕೋದ್ಯಮ ಹಿರಿಯ ವಿದ್ಯಾರ್ಥಿಗಳ ಸಂಘದ ಅಸ್ತಿತ್ವಕ್ಕೆ: ಪ್ರಥಮ ಅಧ್ಯಕ್ಷರಾಗಿ ಪ್ರಕಾಶ್ ಡಿ.ರಾಂಪುರ್


ಮೂಡುಬಿದಿರೆ: ಆಳ್ವಾಸ್ ಸ್ವಾಯತ್ತ ಕಾಲೇಜಿನ ದಶಮಾನ ಸಂಭ್ರಮದಲ್ಲಿರುವ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಕಾಲೇಜಿನಲ್ಲಿ ನಡೆಯಿತು. 

ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ರಚಿಸಲಾಗಿದ್ದು, ಸುದ್ದಿವಾಹನಿಯ ಹಿರಿಯ ವರದಿಗಾರ ಪ್ರಕಾಶ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ನಾಡಿನ ಪ್ರಮುಖ ಪತ್ರಿಕೆ, ಟಿವಿ, ನವಮಾಧ್ಯಮ, ಶಿಕ್ಷಣ ಮತ್ತಿತರ ಸಂಸ್ಥೆಗಳಲ್ಲಿ ವೃತ್ತಿ ನಿರ್ವಹಿಸುತ್ತಿರುವ ಹಿರಿಯ ವಿದ್ಯಾರ್ಥಿಗಳು ಪದಾಧಿಕಾರಿಗಳಾದರು.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಯಾವುದೇ ಕ್ಷೇತ್ರದ ಬೆಳವಣಿಗೆಯ ದೃಷ್ಟಿಯಿಂದ ಹಿರಿಯ ಹಾಗೂ ಪ್ರಸ್ತುತ ವಿದ್ಯಾರ್ಥಿಗಳ ಸಂಪರ್ಕವು ಅತೀ ಅವಶ್ಯ. ಪ್ರಸ್ತುತ ಪತ್ರಿಕೋದ್ಯಮದ ಅವಶ್ಯಕತೆ ಸಮಾಜಕ್ಕೆ ಹೆಚ್ಚಿದೆ. ವೃತಿ ಸ್ವರೂಪ ಬದಲಾಗಿದ್ದು, ಸಮರ್ಥ ಅಭ್ಯರ್ಥಿಗಳಿಗೆ ಬೇಡಿಕೆ ಹೆಚ್ಚಿದೆ ಎಂದರು. 

ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಸಮಾವೇಶ ಉದ್ಘಾಟಿಸಿದರು. 

ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಪ್ರಾಧ್ಯಾಪಕರಾದ ಡಾ. ಶ್ರೀನಿವಾಸ ಹೊಡೆಯಾಲ, ಹರ್ಷವರ್ಧನ ಪಿ. ಆರ್., ಸುಶ್ಮಿತಾ ಜೆ. ದೀಕ್ಷಿತಾ, ಅಕ್ಷಯ್ ಕುಮಾರ್, ಹನ್ನಾ ಫಾತಿಮಾ, ರಕ್ಷಾ ಉಪಸೈಇತರಿದ್ದರು. 

ಪ್ರೇರಣಾ ಕಾರ್ಯಕ್ರಮ ವನ್ನು ನಿರೂಪಿಸಿ, ಮಿಯಾ ಕೆನಡಿ ವಂದಿಸಿದರು.


ಪಧಾಧಿಕಾರಿಗಳು:

ಪ್ರಕಾಶ್ (ಅಧ್ಯಕ್ಷ ), ಅಕ್ಷಯ್ ಕುಮಾರ್ (ಕಾರ್ಯದರ್ಶಿ), ಶಿಧರ್, ಯೇಜಾಸ್, ಅಕ್ಷಯ್ ರೈ (ಉಪಾಧ್ಯಕ್ಷರು), ದೀಪ, ವೀರೇಶ್ (ಕೋಶಾಧಿಕಾರಿ) ಕೀರ್ತನ ಶೆಟ್ಟಿ (ಜಂಟಿ ಕಾರ್ಯದರ್ಶಿ), ರಕ್ಷಿತಾ, ಸಂಪ್ರೀಯ, ಸುಶ್ಮಿತಾ, ನಿಶಾನ್, ನರೇಂದ್ರ, ಅಶ್ವಿನಿ ಜೈನ, ರಮ್ಯಾ, ಜಾಫರ್, ಸುಮಲತಾ, ಪ್ರಮೋದ್, ಇಂಚರ, ಸಿಧಾರ್ಥ, ಇಂದೂಧರ್, ವೆನಿಷಾ, ಉಮರ್ ಫಾರೂಕ್, ಆನಂದ, ಮಾಧವಿ, ವೈಶಾಕ್, ಗೌತಮಿ, ವಿನೀತ್ (ಕಾರ್ಯಕಾರಿ ಸಮಿತಿ ಸದಸ್ಯರು), ಡಾ. ಮೌಲ್ಯ ಬಿ., ಪ್ರಸಾದ್ ಶೆಟ್ಟಿ (ಪ್ರಾಧ್ಯಾಪಕ ಸಂಚಾಲಕರು).

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article