ನರಿಂಗಾನದಲ್ಲಿ ಸ್ವಚ್ಛತಾ ಜಾಥಾ
ಗ್ರಾಮ ಪಂಚಾಯತ್, ಪಿ.ಎ. ಪ್ರಥಮ ದರ್ಜೆ ಕಾಲೇಜು ನಡುಪದವು, ಜನ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ನಡೆದ ಜಾಗೃತಿ ಜಾಥಾವು ನರಿಂಗಾನ ಗ್ರಾ.ಪಂ. ಕಛೇರಿ ವಠಾರದಿಂದ ಆರಂಭವಾಗಿ, ಮಂಜನಾಡಿ,ಮುರತ್ತ ಗುಂಡಿ ನೆತ್ತಿಲ ಪದವು ತೌಡುಗೋಳಿ, ಕಲ್ಮಂಜ, ವಿದ್ಯಾ ನಗರದ ಮೂಲಕ ಸಾಗಿ ಮೊಂಟೆಪದವು ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಸಮಾಪನಗೊಂಡಿತು.
ಜಾಥಾದಲ್ಲಿ ಪ್ಲಾಸ್ಟಿಕ್ ಮಾಲಿನ್ಯದ ಅಪಾಯ, ಶೂನ್ಯ ಕಸ ನಿರ್ವಹಣೆ ಮೂಲಕ ಸುಸ್ಥಿರ ಸ್ವಚ್ಛತೆ ಸಾಧಿಸುವ ಸರಳ ಉಪಾಯಗಳ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸಲಾಯಿತು.
ಜಾಥಾದಲ್ಲಿ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ಗ್ರಾ.ಪಂ ಮಾಜಿ ಅಧ್ಯಕ್ಷ ನವಾಜ್, ಕಾರ್ಯದರ್ಶಿ, ನಳಿನಿ, ಮಾಜಿ ಸದಸ್ಯರಾದ ಅಬ್ದುಲ್ ರಹಿಮಾನ್, ಮುರಳೀಧರ ಶೆಟ್ಟಿ, ಸೆಲೀಮ್, ಶೇಖಬ್ಬ ರಾ.ಸೇ. ಯೋಜನಾಧಿಕಾರಿ ಚೈತ್ರಾ, ಪ್ರಾಧ್ಯಾಪಕರಾದ ಲೋಹಿತ್ ಗಟ್ಟಿ, ಗುರುರಾಜ್ ಸ್ವಯಂ ಸೇವಕ, ಸ್ವಯಂ ಸೇವಕಿಯರು, ಗ್ರಾ.ಪಂ. ಸಿಬ್ಬಂಧಿಗಳು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು. ಜಾಥಾದ ಯಶಸ್ವಿ ಸಂಯೋಜನೆಗೆ ವಿಧಾನ ಸಭಾ ಅಧ್ಯಕ್ಷರ ಆಪ್ತ ಸಹಾಯಕರಾದ ಮುಹಮ್ಮದ್ ಲಿಬ್ಜತ್ ಮಿನಿ ಬಸ್ಸಿನ ವ್ಯವಸ್ಥೆ ಮಾಡಿ ಸಹಕರಿಸಿದ್ದರು.