ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಪ್ರಜ್ವಲ್ ಎಂ. ರಾಷ್ಟ್ರಮಟ್ಟಕ್ಕೆ ಆಯ್ಕೆ

ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಪ್ರಜ್ವಲ್ ಎಂ. ರಾಷ್ಟ್ರಮಟ್ಟಕ್ಕೆ ಆಯ್ಕೆ


ಪುತ್ತೂರು: ಕರ್ನಾಟಕ ಆರ್ಮ್ ರೆಸ್ಟ್ಲಿಂಗ್ ಅಸೋಸಿಯೇಷನ್ ವತಿಯಿಂದ ಪಿ.ಎ.ಎಫ್.ಐ., ಏಷ್ಯಾನ್ ಆರ್ಮ್ ರೆಸ್ಟ್ಲಿಂಗ್ ಫೆಡರೇಶನ್ ಮತ್ತು ವರ್ಲ್ಡ್ ಆರ್ಮ್ ರೆಸ್ಟ್ಲಿಂಗ್ ಫೆಡರೇಶನ್ ಇವುಗಳ ಜಂಟಿ ಆಶ್ರಯದಲ್ಲಿ ಏಪ್ರಿಲ್ 11 ಮತ್ತು 12 ರಂದು ಕುದ್ಮಲ್ ರಂಗರಾವ್ ಹಾಲ್, ಮಂಗಳೂರು ಇಲ್ಲಿ ನಡೆದ ೩ನೇ ಕರ್ನಾಟಕ ರಾಜ್ಯ ಆರ್ಮ್ ರೆಸ್ಟ್ಲಿಂಗ್ ಚಾಂಪಿಯನ್ಶಿಪ್ 2025-26ರಲ್ಲಿ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿ ಭಾಗವಹಿಸಿ ಪದಕ ಗಳಿಸಿದ್ದಾರೆ. 


ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ಪ್ರಜ್ವಲ್ ಎಂ. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ಲೆಫ್ಟ್ ಆರ್ಮ್ ರೆಸ್ಟ್ಲಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಹಾಗೂ ಆರ್ಮ್ ರೆಸ್ಟ್ಲಿಂಗ್ನಲ್ಲಿ ತೃತೀಯ ಸ್ಥಾನವನ್ನು ಗಳಿಸುವ ಮೂಲಕ ಬಹುಮಾನಕ್ಕೆ ಭಾಜನರಾಗಿದ್ದಾರೆ. 

ಇವರು ಮೆ 29 ರಿಂದ ಜೂನ್ 2 ರವರೆಗೆ ರಾಷ್ಟೀಯ ರಕ್ಷಾ ಯೂನಿವರ್ಸಿಟಿ ಲವದ್ ಕ್ಯಾಂಪಸ್, ದಹೇಗಂ ಗಾಂಧಿನಗರ, ಗುಜರಾತ್ ಇಲ್ಲಿ ನಡೆಯಲಿರುವ ೪ನೇ ಪಿ.ಎ.ಎಫ್.ಐ ನ್ಯಾಷನಲ್ ಆರ್ಮ್ ರೆಸ್ಟ್ಲಿಂಗ್ ಚಾಂಪಿನ್ಶಿಪ್ 2026ಕ್ಕೆ ಆಯ್ಕೆಯಾಗಿದ್ದಾರೆ. 

ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಆಡಳಿತ ಮಂಡಳಿಯವರು ವಿದ್ಯಾರ್ಥಿಯ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article