ಅಕ್ರಮವಾಗಿ ಪ್ರವೇಶಿಸಿ ಕಟ್ಟಡ ತೆರವು ಆರೋಪ: ಪ್ರಕರಣ ದಾಖಲು

ಅಕ್ರಮವಾಗಿ ಪ್ರವೇಶಿಸಿ ಕಟ್ಟಡ ತೆರವು ಆರೋಪ: ಪ್ರಕರಣ ದಾಖಲು

ಪುತ್ತೂರು: ನಗರದ ಮುಖ್ಯ ರಸ್ತೆಯ ಬದಿಯಲ್ಲಿನ ಹಳೆಯ ಕಟ್ಟಡ ಮತ್ತು ಜಮೀನಿಗೆ ಏ.14 ರಂದು ಅಕ್ರಮವಾಗಿ ಪ್ರವೇಶ ಮಾಡಿ ಜಮೀನಿನಲ್ಲಿದ್ದ ಹಳೆಯ ಕಟ್ಟಡವನ್ನು ಕೆಡವಿದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು ಕದ್ರಿಹಿಲ್ಸ್ ನಿವಾಸಿ ಡಾ. ಅರವಿಂದ ರಾವ್ ಕೇದಿಗೆ ಎಂಬವರು ನೀಡಿದ ದೂರಿನಂತೆ ಈ ಪ್ರಕರಣ ದಾಖಲಾಗಿದೆ.

ಸಿಜೆ ಮತ್ತು ಜೆಎಂಎಫ್‌ಸಿ ಬಂಟ್ವಾಳ ನ್ಯಾಯಾಲಯದ ಅದೇಶದಂತೆ ಪುತ್ತೂರು ಮುಖ್ಯ ರಸ್ತೆಯ ಬದಿಯಲ್ಲಿರುವ ಹಳೇಯ ಕಟ್ಟಡ ಮತ್ತು ಜಮೀನು ದೂರುದಾರ ಡಾ. ಅರವಿಂದ ರಾವ್ ಕೇದಿಗೆಯವರ ಸುಪರ್ಧಿಯಲ್ಲಿತ್ತು. ಏ.14 ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿ ಮತ್ತು ಇತರರು ಹಳೇಯ ಕಟ್ಟಡವನ್ನು ಕೆಡವಿರುವುದಾಗಿ ಆರೋಪಿಸಿ ಏ.17 ರಂದು ಕೇದಿಗೆಯವರು ದೂರು ನೀಡಿದ್ದರು.

ಈ ದೂರಿನಂತೆ ಪುತ್ತೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article