ಎ.24 ರಂದು ಕುಕ್ಕೆ ದೇವಳದಲ್ಲಿ ತಾಂಬೂಲ ಪ್ರಶ್ನಾ ಚಿಂತನೆ
Wednesday, April 22, 2026
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎ.24 ರಂದು ತಾಂಬೂಲ ಪ್ರಶ್ನಾ ಚಿಂತನೆಯು ದೇವಳದ ಆಡಳಿತ ಕಚೇರಿಯ ಎರಡನೇ ಮಹಡಿಯ ಸಭಾಂಗಣದಲ್ಲಿ ಬೆಳಗ್ಗೆ 10.30ರಿಂದ ನಡೆಯಲಿದೆ.
ಶ್ರೀ ದೇವಳದಲ್ಲಿ ನಡೆಸುವ ಅಭಿವೃದ್ಧಿ ವಿಚಾರದ ಕುರಿತು, ಪರಿವಾರ ದೇವರ ಗುಡಿ ನವೀಕರಣ, ದೈವಗಳ ಗುಡಿಗಳ ನವೀಕರಣ ಮತ್ತು ಇತರ ವಿಚಾರಗಳ ಬಗ್ಗೆ ನಡೆಸುವ ಪ್ರಶ್ನಾ ಚಿಂತನೆಯಲ್ಲಿ ಸರ್ವ ಭಕ್ತರೂ ಭಾಗವಹಿಸಬೇಕಾಗಿ ಶ್ರೀ ದೇವಳದ ಆಡಳಿತ ಪ್ರಕಟಣೆ ಮೂಲಕ ವಿನಂತಿಸಿದೆ.