ರೋಟರಿ ಕ್ಲಬ್ ವತಿಯಿಂದ ಬೈಕ್ ರ‍್ಯಾಲಿ
Wednesday, April 22, 2026
ಸುಬ್ರಹ್ಮಣ್ಯ: ರೋಟರಿ ಕ್ಲಬ್ ಮಡಿಕೇರಿ ವುಡ್ಸ್‌ನ ಪೂರ್ವ ಅಧ್ಯಕ್ಷರು, ಅಧ್ಯಕ್ಷರು ಹಾಗೂ ಸದಸ್ಯರನ್ನು ಒಳಗೊಂಡ ಏಳು ಜನರ ತಂಡವು ಮಡಿಕೇರಿ, ಸುಳ್ಯ, ಸುಬ್ರಹ್ಮಣ್ಯ, ಬಿಸಿಲೆ, ಸೋಮವಾರಪೇಟೆಗಾಗಿ ಮತ್ತೆ ಮಡಿಕೇರಿ ತಲುಪುವ ಬೇಸಿಗೆ ಸೀಸನ್‌ನ ಬೈಕ್ ರ‍್ಯಾಲಿಯನ್ನು ಆಯೋಜಿಸಿದ್ದರು.
ಮಡಿಕೇರಿಯಿಂದ ಹೊರಟ ತಂಡವು ಬುಧವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಸುಬ್ರಹ್ಮಣ್ಯ ಕುಮಾರಧಾರ ದ್ವಾರದ ಬಳಿ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಜಯಪ್ರಕಾಶ್, ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ ನಾಯರ್, ಪೂರ್ವ ಅಧ್ಯಕ್ಷ ರವಿ ಕಕ್ಕೆ ಪದವು, ನಿಯೋಜಿತ ಅಧ್ಯಕ್ಷ ರೋಹಿತ್ ಬಿಬಿ ರ‍್ಯಾಲಿಯನ್ನು ಬರಮಾಡಿಕೊಂಡರು. ತದನಂತರ ಸುಬ್ರಹ್ಮಣ್ಯದ ಕುಮಾರಧಾರ ದ್ವಾರದ ಬಳಿ ಎರಡು ಕ್ಲಬ್ಬಿನವರ ಫ್ಲಾಗ್ ಗಳನ್ನ ಎಕ್ಸ್ಚೇಂಜ್ ಮಾಡಿಕೊಳ್ಳಲಾಯಿತು. ತದನಂತರ ಸ್ವಲ್ಪ ಹೊತ್ತು ವಿರಮಿಸಿ ಅಲ್ಲಿಂದ ರ‍್ಯಾಲಿ ಮುಂದುವರೆಯಿತು.