ಕುಕ್ಕೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಸೇವೆಯಲ್ಲಿ ಪಾಲ್ಗೊಂಡ ಭಕ್ತರು

ಕುಕ್ಕೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಸೇವೆಯಲ್ಲಿ ಪಾಲ್ಗೊಂಡ ಭಕ್ತರು


ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿವಿಧ ಊರುಗಳಿಂದ ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತರು ಕಳೆದ ಮೂರು ದಿನಗಳಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಬಂದು ಶೇಷ ಸೇವೆ,ಆಶ್ಲೇಷ ಬಲಿ, ನಾಗ ಪ್ರತಿಷ್ಠೆ, ಸರ್ಪ ಸಂಸ್ಕಾರ ಹಾಗೂ ಮಹಾಪೂಜೆ ಮತ್ತು ಇನ್ನಿತರ ಸೇವೆಗಳಲ್ಲಿ ಪಾಲ್ಗೊಂಡಿರುವರು.


ಶ್ರೀ ದೇವಳದ ಅಧಿಕಾರಿವೃಂದದವರು ಸಿಬ್ಬಂದಿ ವರ್ಗದವರು ಭದ್ರತಾ ಸಿಬ್ಬಂದಿಯವರು ಹಾಗೂ ಪೊಲೀಸ್ ಇಲಾಖೆ ವತಿಯಿಂದ ಭಕ್ತರ ಸುಗಮ ದರ್ಶನ, ವಿವಿಧ  ಸೇವೆ, ಹಾಗೂ ವಾಹನಗಳ ಪಾರ್ಕಿಂಗ್ ಪ್ರದೇಶಗಳಲ್ಲಿ ಸುಗಮ ವ್ಯವಸ್ಥೆಗಳಿಗಾಗಿ ಸೂಕ್ತ ಕ್ರಮಗಳನ್ನ ಕೈಗೊಂಡಿದ್ದರು. ವಾನ ಪಾರ್ಕಿಂಗ್ ಪ್ರದೇಶಗಳೆಲ್ಲವೂ ವಾಹನಗಳಿಂದ ತುಂಬಿದ್ದವು. 


ಶ್ರೀ ದೇವಳ ಹಾಗೂ ಖಾಸಗಿ ವಸತಿ ಗ್ರಹಗಳೆಲ್ಲವೂ ಪ್ರವಾಸಿಗರ ಹಾಗೂ ಭಕ್ತರಿಂದ ಭರ್ತಿಯಾಗಿ ಇದ್ದವು. ಮಧ್ಯಾಹ್ನದ ಸಮಯದಲ್ಲಿ ಶ್ರೀ ದೇವಳದ ಹೊರಾಂಗಣದಲ್ಲಿ ಬೇರೆ ಬೇರೆ ಸೇವೆಗಳನ್ನ ನಡೆಸುವ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು. 

ನಾಗ ಪ್ರತಿಷ್ಠಾ ಮಂಟಪದ ಎದುರುಗಡೆ ನಡೆದಾಡಲು ಜಾಗವಿಲ್ಲದಷ್ಟು ಭಕ್ತರು ಕುಳಿತಿದ್ದರು. ಮುಂದಿನ ದಿನಗಳಲ್ಲಿ ರಜಾ ಸಮಯವಿರುವುದರಿಂದ ಅಧಿಕ ಸಂಖ್ಯೆಯ ಪ್ರವಾಸಿಗರು ಹಾಗೂ ಭಕ್ತರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವ ನಿರೀಕ್ಷೆ ಇದೆ. ಭಕ್ತರ ಸುಗಮ ದರ್ಶನ,ಭೋಜನ ಪ್ರಸಾದ ಹಾಗೂ ತೀರ್ಥ ಪ್ರಸಾದಕ್ಕೆ ಶ್ರೀ ದೇವರ ದ ವತಿಯಿಂದ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article