ನೇಣುಬಿಗಿದ ಸ್ಥಿತಿಯಲ್ಲಿ ಅಸ್ಥಿ ಪಂಜರ ಪತ್ತೆ
Tuesday, April 21, 2026
ಸುಬ್ರಮಣ್ಯ: ಐನೆಕಿದು ಗ್ರಾಮದ ಖಾಸಗಿಯವರ ಜಾಗದ ಪಕ್ಕದ ಕಾಡಿನಲ್ಲಿ ನೇಣು ಬಿಗಿದು ಮೃತ ಪಟ್ಟಿರುವ ಅಸ್ಥಿ ಪಂಜರ ಪತ್ತೆಯಾಗಿದ್ದು ಇದು ಕಲ್ಮಕಾರು ಗ್ರಾಮದ ಯಶವಂತ ಕಾಜಿಮಡ್ಕ ಎಂಬವರದ್ದೆಂದು ನಂಬಲಾಗಿದೆ.
ಯಶವಂತ ಕಾಜಿಮಡ್ಕ ಎಂಬವರು ನಾಲ್ಕು ತಿಂಗಳ ಹಿಂದೆ ಕಾಣೆಯಾಗಿದ್ದು ಆ ಬಳಿಕ ಪತ್ತೆಯಾಗಿರಲಿಲ್ಲ. ಈ ಬಗ್ಗೆ ದೂರು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಯಶವಂತ ಅವರು ಪತ್ನಿ ಸಮೇತ ಐನೆಕಿದು ಗ್ರಾಮದ ಪ್ರಶಾಂತ್ ಕೋನಡ್ಕ ಎಂಬವರ ಮನೆಯಲ್ಲಿ ಕೆಲ ಸಮಯದಿಂದ ಕೆಲಸಕ್ಕಿದ್ದರೆನ್ನಲಾಗಿದ್ದು, ಪ್ರಸ್ತುತ ಮೃತ ದೇಹ ದೊರೆತಿರುವ ಜಾಗವು ಪ್ರಶಾಂತ್ ಅವರ ಜಾಗದ ಪಕ್ಕದ ಕಾಡಿನಲ್ಲಿ ಬಹಳ ತಿಂಗಳ ಹಿಂದೆ ಮೃತ ಪಟ್ಟರೆನ್ಬಲಾದ ಮೃತ ದೇಹ ಪತ್ತೆಯಾಗಿದೆ.
ಕೇವಲ ಅಸ್ಥಿ ಪಂಜರ ಮಾತ್ರವಿದ್ದು ಯಶವಂತ ಅವರ ಮೊಬೈಲ್ ಕೂಡ ಅಲ್ಲೆ ದೊರೆತಿರುವ ಕಾರಣ ಮೃತ ದೇಹ ಯಶವಂತ ಕಾಜಿಮಡ್ಕ ಎಂಬವರದ್ದೆಂದು ನಂಬಲಾಗಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹ ಯಶವಂತದ್ದೆ ಎಂದು ದೃಢೀಕರಿಸಲು ಡಿ.ಎನ್.ಎ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.