ಅಜ್ಜರಕಾಡು ಸರ್ಕಾರಿ ಕಾಲೇಜಿನಲ್ಲಿ 'ಲಕ್ಷ್ಯ-2026' ಉದ್ಘಾಟನೆ

ಅಜ್ಜರಕಾಡು ಸರ್ಕಾರಿ ಕಾಲೇಜಿನಲ್ಲಿ 'ಲಕ್ಷ್ಯ-2026' ಉದ್ಘಾಟನೆ


ಉಡುಪಿ: ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇಲ್ಲಿನ ವಾಣಿಜ್ಯಶಾಸ್ತ್ರ, ನಿರ್ವಹಣಾ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಾಸಕೋಶ ಇದರ ಸಂಯುಕ್ತ ಆಶ್ರಯದಲ್ಲಿ  ಹಮ್ಮಿಕೊಳ್ಳಲಾದ ಒಂದು ದಿನದ ನಿರ್ವಹಣಾ ಹಬ್ಬ 'ಲಕ್ಷ್ಯ-2026' ಅನ್ನು ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಪಿ. ಜಿ ಸಭಾಂಗಣದಲ್ಲಿ ನಡೆಯಿತು. 


ಮಹಿಳಾ ಉದ್ಯಮಿ ಮತ್ತು  ಫುಡ್ ಬ್ಲಾಗರ್ ಆದ ರೋವೆನಾ ಫೆರ್ನಾಂಡಿಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜೀವನದಲ್ಲೊಂದು ನಿರ್ದಿಷ್ಟ ಗುರಿಯನ್ನು ಹೊಂದಿದ್ದರೆ ಮಾತ್ರ ಸಾಲದು ಆಸಕ್ತಿ, ಶೃದೆ, ಧೈರ್ಯ ಮತ್ತು ಸೃಜನಶೀಲತೆಯಿಂದ ಗುರಿಯನ್ನು ತಲುಪಲು ಸತತ ಪ್ರಯತ್ನಗಳು ನಡೆದರೆ ಮಾತ್ರ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಅನಿರುದ್ಧ್ ಎಂಟರ್ ಪ್ರೈಸ್ ನ ನಿರ್ದೇಶಕಿ  ಮಲ್ಲಿಕಾ ಮಾತನಾಡಿ ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗೆ ಉತ್ತಮ ಅವಕಾಶಗಳು ಇದೆ. ತಮ್ಮ ತಮ್ಮ ಆಸಕ್ತಿಯ ಕ್ಷೇತ್ರಗಳನ್ನು ಆಯ್ದುಕೊಂಡು ಅದರಲ್ಲಿ ಶ್ರಮ ಪಟ್ಟು ಕೆಲಸ ಮಾಡಿದರೆ ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸೋಜಾನ್ ಕೆ. ಜಿ ವಹಿಸಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೃಷ್ಣ ಭಟ್, ವಿಧ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ನಿಕೇತನ, ಐ.ಕ್ಯೂ.ಎ.ಸಿ ಸಂಚಾಲಕರಾದ ಪ್ರೊ. ಶ್ರೀಮತಿ ಅಡಿಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಕಾಲೇಜಿನ ವಾಣಿಜ್ಯ ವಿಭಾಗದ  ವಿಧ್ಯಾರ್ಥಿಗಳು ಇರಿಸಿದ ವಿವಿಧ ಅಂಗಡಿ, ಸ್ಟಾಲ್ ಗಳು ವಿಶೇಷವಾಗಿ ಗಮನ ಸೆಳೆಯಿತು. 

ಕಾಲೇಜಿನ ವಾಣಿಜ್ಯಶಾಸ್ತ್ರ ಪಿ.ಜಿ ವಿಭಾಗದ ಸಂಯೋಜಕರಾದ ಡಾ. ವರಿಜಾ ಸ್ವಾಗತಿಸಿ, ವಿಭಾಗದ ಸಹಾಯಕ ಪ್ರದ್ಯಾಪಕರಾದ ಡಾ. ಅಬ್ದುಲ್ ರಜಾಕ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article