ಲಯನ್ಸ್ ರಾಜ್ಯಪಾಲ ಕುಡ್ಪಿ ಅರವಿಂದ ಶೆಣೈ ಮೂಡುಬಿದಿರೆ ಲಯನ್ಸ್ ಕ್ಲಬ್‌ಗೆ ಅಧಿಕೃತ ಭೇಟಿ

ಲಯನ್ಸ್ ರಾಜ್ಯಪಾಲ ಕುಡ್ಪಿ ಅರವಿಂದ ಶೆಣೈ ಮೂಡುಬಿದಿರೆ ಲಯನ್ಸ್ ಕ್ಲಬ್‌ಗೆ ಅಧಿಕೃತ ಭೇಟಿ


ಮೂಡುಬಿದಿರೆ: ಸ್ವಂತ ಕಟ್ಟಡ ಹೊಂದಿರುವ ಕ್ಲಬ್‌ಗಳು ಸುಭದ್ರ ಕ್ಲಬ್‌ಗಳೆಂದು ಗುರುತಿಸಲಾಗುತ್ತಿದ್ದು ಅಂತಹ ಕ್ಲಬ್‌ಗಳಿಗೆ ಸೂಕ್ತವಾದ ಗೌರವ ಸಿಗುತ್ತದೆ ಎಂದು ಲಯನ್ಸ್ ಜಿಲ್ಲೆ 317ಡಿಯ ರಾಜ್ಯಪಾಲ ಕುಡ್ಪಿ ಅರವಿಂದ ಶೆಣೈ ಅಭಿಪ್ರಾಯಪಟ್ಟರು.

ಅವರು ಸುವರ್ಣ ವರ್ಷಾಚರಣೆಯ ಸಂಭ್ರಮದಲ್ಲಿರುವ ಮೂಡುಬಿದಿರೆ ಲಯನ್ಸ್ ಕ್ಲಬ್‌ಗೆ ಶುಕ್ರವಾರ ಸಂಜೆ ಅಧಿಕೃತ ಭೇಟಿ ನೀಡಿದ ಸಂದರ್ಭ ಇಲ್ಲಿನ ಹೋಟೆಲ್ ಪಂಚರತ್ನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಲಯನ್ಸ್ ದತ್ತಿ ನಿಧಿಗೆ ಸದಸ್ಯರು ನೀಡುವ ಕೊಡುಗೆ ಸದುಪಯೋಗವಾಗುತ್ತಿದೆ.

ಜಿಲ್ಲೆಯ ಎಲ್ಲಾ ಕ್ಲಬ್‌ಗಳಲ್ಲಿ ಹಮ್ಮಿಕೊಂಡಿದ್ದ ಆಹಾರ ಕಿಟ್ ಗಳ ವಿತರಣೆಗೆ ರೂ. 15 ಲಕ್ಷ, ಮುಡಿಪು ಶುಶ್ರೂಷಾ ಕೇಂದ್ರಕ್ಕೆ ರೂ. 1.50 ಕೋಟಿ, ಗೋಣಿಕೊಪ್ಪಲ್ ಲಯನ್ಸ್ ಶಾಲೆಗೆ 5ನೇ ಹಂತದಲ್ಲಿ ರೂ.1 ಕೋಟಿ, ಇಸ್ಕಾನ್ ಸಂಸ್ಥೆಯ ಮಧ್ಯಾಹ್ನದ ಮಕ್ಕಳ ಊಟಕ್ಕೆ ರೂ. 25 ಲಕ್ಷ, ಹಾಸನದ ಕ್ಲಬ್ ಕಟ್ಟಡಕ್ಕೆ ರೂ. 2 ಲಕ್ಷ ಈಗಾಗಲೇ ಲಯನ್ಸ್ ದತ್ತಿನಿಧಿಯಿಂದ ಬಂದಿದ್ದು, ಉಚಿತ ನೇತ್ರ ಶಿಬಿರಕ್ಕೆ ರೂ. 30ಲಕ್ಷ ಬರಲಿದೆ. ಆದುದರಿಂದ ಲಯನ್ಸ್ ಸದಸ್ಯರು ದತ್ತಿನಿಧಿಗೆ ದೇಣಿಗೆ ನೀಡಿ ಸಹಕರಿಸಬೇಕು ಎಂದರಲ್ಲದೆ ಮೂಡುಬಿದಿರೆ ಲಯನ್ಸ್ ಕ್ಲಬ್‌ನ ಸೇವಾಪರ ಯೋಜನೆಗಳನ್ನು ಮುಕ್ತಕಂಠದ ಪ್ರಶಂಸೆ ವ್ಯಕ್ತಪಡಿಸಿದರು.

ಮೂಡುಬಿದಿರೆ ಲಯನ್ಸ್ ಸುವರ್ಣ ಮಹೋತ್ಸವ ವರ್ಷದ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಅವರು  ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಕ್ಲಬ್‌ನ ಸರ್ವ ಸದಸ್ಯರ ಆಯ್ಕೆಯಾಗಿ ಎರಡನೇ ಬಾರಿಗೆ ಕ್ಲಬ್ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದಾಗ ಸುವರ್ಣ ಮಹೋತ್ಸವ ವರ್ಷವನ್ನು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ಲಯನ್ಸ್ ಸಭಾ ಭವನ ನಿರ್ಮಾಣದ ಮೂಲಕ ಸಮಾಜಕ್ಕೆ ವಿಶಿಷ್ಟ ಕೊಡುಗೆ ನೀಡಬೇಕು ಎಂಬ ಏಕ ವಿಷಯದ ಕಾರ್ಯಸೂಚಿ ಇಟ್ಟುಕೊಂಡಿದ್ದೆ. ಇದಕ್ಕೆ ಪೂರಕವಾಗಿ ಹಿರಿಯ ಸದಸ್ಯ ಕೆ. ಎನ್. ಶೆಟ್ಟಿಯವರು ರೂ. 5 ಲಕ್ಷ ಹಾಗೂ ಇತರ 20 ಮಂದಿ ಸದಸ್ಯರು ತಲಾ ರೂ. 1 ಲಕ್ಷದ ಕೊಡುಗೆ ನೀಡಿ ಲಯನ್ಸ್ ಟ್ರಸ್ಟ್ ಸ್ಥಾಪನೆಗೆ ಸಹಕಾರ ನೀಡಿರುವುದನ್ನು ಸ್ಮರಿಸಿದರಲ್ಲದೆ ಮೇ ತಿಂಗಳಲ್ಲಿ ಸುವರ್ಣ ಮಹೋತ್ಸವ ಸಮಾರಂಭವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ನಿಯೋಜಿತ ರಾಜ್ಯಪಾಲ ಗೋವರ್ಧನ ಶೆಟ್ಟಿ, ಎರಡನೇ ಚುನಾಯಿತ ರಾಜ್ಯಪಾಲ ವೆಂಕಟೇಶ್ ಹೆಬ್ಬಾರ್, ಜಿಲ್ಲಾ ಸಂಪುಟದ ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ ರೈ, ಸಂಪುಟ ಕೋಶಾಧಿಕಾರಿ ಬಾಲಕೃಷ್ಣ ಹೆಗ್ಡೆ, ಪ್ರಾಂತೀಯ ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ., ವಲಯಾಧ್ಯಕ್ಷ ಜೊಸ್ಸಿ ಮಿನೇಜಸ್ ಶುಭಾಶಂಸನೆಗೈದರು. ವಲಯ ಪ್ರತಿನಿಧಿ ಪ್ರತಿಭಾ ಹೆಬ್ಬಾರ್, ಕ್ಲಬ್ ಕಾರ್ಯದರ್ಶಿ ಓಸ್ವಾಲ್ಡ್ ಡಿಕೋಸ್ತ, ಖಜಾಂಚಿ ಹರೀಶ್ ತಂತ್ರಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಚುನಾಯಿತ 2ನೇ ರಾಜ್ಯಪಾಲ ವೆಂಕಟೇಶ ಹೆಬ್ಬಾರ್ ಮತ್ತು ಪ್ರತಿಭಾ ಹೆಬ್ಬಾರ್ ದಂಪತಿಗಳನ್ನು ಮತ್ತು ಹಿರಿಯ ಸದಸ್ಯ ತಿಮ್ಮಯ್ಯ ಶೆಟ್ಟಿ ಮತ್ತು ಕಾಂತಿಲತಾ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಲಾಯಿತು. ಜಿಲ್ಲಾ ರಾಜ್ಯಪಾಲರಿಗೆ ಅಭಿನಂದನಾ ಪತ್ರ ಸಲ್ಲಿಸಲಾಯಿತು.

ಸೇವಾ ಕಾರ್ಯಕ್ರಮದ ಅಂಗವಾಗಿ 100 ಮಂದಿ ಆಟೋ ಚಾಲಕರಿಗೆ ತಲಾ ರೂ. 1 ಲಕ್ಷದ ವಿಮಾ ಯೋಜನೆ, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಆಲಂಗಾರಿನ ಗಣೇಶ ಶೆಟ್ಟಿಯವರ ಚಿಕಿತ್ಸೆಗೆ ರೂ. 10 ಸಾವಿರ, ವಂಷಿಕಾ ಮತ್ತು ರುಥ್ವಿಕಾ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ತಲಾ ರೂ. 10 ಸಾವಿರ ಕಲ್ಲಬೆಟ್ಟು ಸರಕಾರಿ ಶಾಲೆಯಲ್ಲಿ ಇಂಟರ್ ಲಾಕ್ ಅಳ ವಡಿಕೆಗೆ ರೂ. 10 ಸಾವಿರ ಸಹಾಯಧನ ವಿತರಿಸಲಾಯಿತು. ಅವಿನಾಶ್ ಅವರನ್ನು ಹೊಸ ಸದಸ್ಯರಾಗಿ ಕ್ಲಬ್‌ಗೆ ಸೇರ್ಪಡೆ ಮಾಡಲಾಯಿತು.

ಸಂದೀಪ್ ರಾವ್ ಜಿಲ್ಲಾ ರಾಜ್ಯಪಾಲರನ್ನು ಸಭೆಗೆ ಪರಿಚಯಿಸಿದರು. ಅರುಣ್ ಡಿಸಿಲ್ವ ಪ್ರಶಂಸಾ ಪತ್ರ ವಾಚಿಸಿದರು. ವಿನಯಾ ಅರವಿಂದ ಪ್ರಭು ಪ್ರಾರ್ಥಿಸಿದರು. ಕ್ಲಿಫರ್ಡ್ ರೋಕಿ ಪಿಂಟೊ ಧ್ವಜವಂದನೆ ನೆರವೇರಿಸಿದರು. ಆಲ್ವಿನ್ ಮಿನೇಜಸ್ ನೀತಿ ಸಂಹಿತೆ ಪಠಿಸಿದರು. ದಯಾನಂದ ಮತ್ತು ವಿನೋದ್ ಡೇಸಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಓಸ್ವಾಲ್ಡ್ ಡಿಕೋಸ್ತ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article