ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವದೊಂದಿಗೆ ಭಾರತೀಯ ಜೀವ ವಿಮಾ ನಿಗಮದಿಂದ 365 ವಿಮಾ ಗ್ರಾಮಗಳ ಘೋಷಣೆ
ವಿಮಾ ಗ್ರಾಮ:
ಪ್ರತಿ ಗ್ರಾಮದ ಜನಸಂಖ್ಯೆ ಮತ್ತು ಅಲ್ಲಿ ಮಾಡಲಾದ ಮೈಕ್ರೋಬಚತ್ ಪಾಲಿಸಿಯ ಆಧಾರದಲ್ಲಿ ವಿಮಾ ಗ್ರಾಮಗಳನ್ನು ಗುರುತಿಸುವ ಕೆಲಸವನ್ನು ಭಾರತೀಯ ಜೀವ ವಿಮಾ ನಿಗಮವು ಮಾಡುತ್ತದೆ.
ವಿಮಾಗ್ರಾಮದ ಸೌಲಭ್ಯ ಪಡೆಯಲು ಮಾನದಂಡಗಳು:
*ಗ್ರಾಮದ ಜನಸಂಖ್ಯೆ 10,000 ಕ್ಕಿಂತ ಕಡಿಮೆ ಇರಬೇಕು
*ಸಂಬಂಧಿತ ಆರ್ಥಿಕ ವರ್ಷದಲ್ಲಿ ಕನಿಷ್ಟ 100 ಹೊಸ ಪಾಲಿಸಿಗಳಾಗಿರಬೇಕು.
*ಸಂಬಂಧಿತ ಆರ್ಥಿಕ ವರ್ಷದಲ್ಲಿ 5,00,000 ರೂ. ಮೊತ್ತ ಪ್ರೀಮಿಯಂ ಸಂಗ್ರಹವಾಗಿದ್ದಲ್ಲಿ ಕನಿಷ್ಟ 50 ಹೊಸ ಪಾಲಿಸಿಗಳಾಗಿರಬೇಕು.
ಈವರೆಗೆ ನೀಡಲಾದ ಸೌಲಭ್ಯಗಳು:
ಈಗಾಗಲೇ 2019 ರಿಂದ ರಾಜ್ಯದಾದ್ಯಂತ 365 ವಿಮಾ ಗ್ರಾಮಗಳನ್ನು ಗುರುತಿಸಲಾಗಿದೆ. ಆಯ್ಕೆಯಾದ ಗ್ರಾಮಗಳಿಗೆ ಒಂದು ಘಟಕಕ್ಕೆ 50,000 ರೂ. ದಿಂದ 1,00,000 ರೂ. ದವರೆಗಿನ ವೆಚ್ಚದಲ್ಲಿ ಈ ಕೆಳಗಿನ ಯಾವುದಾದರೂ ಒಂದು ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಈ ಯೋಜನೆಯಡಿ ಶಾಲೆ/ ಗ್ರಾಮ ಪಂಚಾಯತ್/ ದೇವಸ್ಥಾನಗಳಿಗೆ ಕುಡಿಯುವ ನೀರಿನ ವ್ಯವಸ್ಥೆ (ನೀರಿನ ಟ್ಯಾಂಕ್, ಶುದ್ಧ ಕುಡಿಯುವ ನೀರಿನ ಘಟಕ), ಶಾಲೆಗಳಿಗೆ ಶೌಚಾಲಯ ಹಾಗೂ ಪೀಠೋಪಕರಣ, ಸೋಲಾರ್ ದಾರಿದೀಪ ವ್ಯವಸ್ಥೆ ಒಳಗೊಂಡಿರುತ್ತದೆ.
ವಿಮಾ ಗ್ರಾಮದಡಿ ಈಗಾಗಲೇ ಸೌಲಭ್ಯ ನೀಡಲಾದ ವಿವರಗಳು:
ಹಾವೇರಿ ತಾಲ್ಲೂಕಿನ ಅಗಡಿ ಗ್ರಾಮದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಹಾಗೂ ಭಾರತೀಯ ಜೀವ ವಿಮಾ ನಿಗಮದ ವತಿಯಿಂದ 2024-25ನೇ ಸಾಲಿನ ವಿಮಾ ಗ್ರಾಮ ಕಾರ್ಯಕ್ರಮದಡಿ ಆಯ್ಕೆಯಾಗಿರುವ ಶ್ರೀ ಶ್ರೇಷಾಚಲ ಸದ್ಗುರು ಅನುದಾನಿತ ಪ್ರೌಢಶಾಲೆಯಲ್ಲಿ ರಚನೆ ಮಾಡಲಾಗಿರುವ ಶೌಚಾಲಯವನ್ನು ಹಸ್ತಾಂತರ ಮಾಡಲಾಯಿತು.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌನಿಪಲ್ಲಿ ಗ್ರಾಮದಲ್ಲಿ ನಿಗದಿತ ಸಂಖ್ಯೆಯಲ್ಲಿ LIC ಮೈಕ್ರೋ ವಿಮೆ ಪಾಲಿಸಿ ಮಾಡಿರುವ ಬಗ್ಗೆ ಭಾರತೀಯ ಜೀವ ವಿಮಾ ನಿಗಮ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಸಹಭಾಗಿತ್ವದಲ್ಲಿ ಗೌನಿಪಲ್ಲಿ ಗ್ರಾಮವನ್ನು ಮೈಕ್ರೋ ವಿಮಾ ಗ್ರಾಮವಾಗಿ ಘೋಷಿಸಿದ್ದು, ವಿಮಾ ಗ್ರಾಮದ ಯೋಜನೆಯಡಿ ಗೌನಿಪಲ್ಲಿ ಪೋಲಿಸ್ ಆರಕ್ಷಕ ಠಾಣೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪನೆಮಾಡಿ ಹಸ್ತಾಂತರಿಸಲಾಯಿತು.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ-2 ತಾಲ್ಲೂಕಿನ ಹೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೋಳೂರು ಗ್ರಾಮದಲ್ಲಿ ಭಾರತೀಯ ಜೀವ ವಿಮಾ ನಿಗಮ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಸಹಭಾಗಿತ್ವದಲ್ಲಿ ಹೋಳೂರು ಗ್ರಾಮವನ್ನು ಮೈಕ್ರೋ ವಿಮಾ ಗ್ರಾಮವಾಗಿ ಘೋಷಿಸಲಾಗಿದ್ದು, ಗ್ರಾಮದ ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪನೆಮಾಡಿ ಹಸ್ತಾಂತರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಮಧುಗಿರಿ ಯೋಜನಾ ಕಚೇರಿಯ ಕೊಡಿಗೇನಹಳ್ಳಿ ವಲಯದ ವಿವೇಕಾನಂದ ಹೈಸ್ಕೂಲ್‌ನಲ್ಲಿ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ LIC Deputy manager ಸುರೇಶ್ ಯೋಜನಾಧಿಕಾರಿ ದಿನೇಶ್ ಕುಮಾರ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸದಸ್ಯರಾದ ಮಂಜುನಾಥ್ ಹೈಸ್ಕೂಲಿನ ಪ್ರಾಂಶುಪಾಲರ ಉಪಸ್ಥಿತಿಯಲ್ಲಿ ಉದ್ಘಾಟನೆ ನೆರವೇರಿಸಿ ನೀರಿನ ಸಂರಕ್ಷಣೆ ಮತ್ತು ಅದರ ಉಪಯೋಗ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಮಾಹಿತಿ ನೀಡಲಾಯಿತು.
ಈಗಾಗಲೇ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದಲ್ಲಿ ರಾಜ್ಯದಾದ್ಯಂತ 365 ವಿಮಾ ಗ್ರಾಮಗಳನ್ನು ಗುರುತಿಸಿ 1,42,63,016 ರೂ. ವೆಚ್ಚದ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಅನಿಲ್ ಕುಮಾರ್ ಎಸ್.ಎಸ್. ಅವರು ತಿಳಿಸಿದ್ದಾರೆ.



