ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನಗಳ ಕಾಲೇಜು ವಿಶ್ವವಿದ್ಯಾಲಯ ಮಟ್ಟದಲ್ಲಿ ಗಣನೀಯ ಸಾಧನೆ

ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನಗಳ ಕಾಲೇಜು ವಿಶ್ವವಿದ್ಯಾಲಯ ಮಟ್ಟದಲ್ಲಿ ಗಣನೀಯ ಸಾಧನೆ


ಉಜಿರೆ: ಉಜಿರೆಯ ಎಸ್‌ಡಿಎಂ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸಸ್ ಕಾಲೇಜಿನ ವಿದ್ಯಾರ್ಥಿಗಳು ಪ್ರತಿವರ್ಷದಂತೆ ಈ ಬಾರಿಯೂ ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಸ್ನಾತಕೋತರ ಫಲಿತಾಂಶದಲ್ಲಿ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಉನ್ನತ ರ‍್ಯಾಂಕ್ ಗಳಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.


ಎಂ.ಡಿ. ನ್ಯಾಚುರೋಪಥಿ ವಿಭಾಗದಲ್ಲಿ ಡಾ. ಆದಿತಿ ಗಿರಿಧರನ್ 1ನೇ ರ‍್ಯಾಂಕ್, ಡಾ. ಮಿಥುನ್ ಎ.ಸಿ. 3ನೇ ರ‍್ಯಾಂಕ್, ಡಾ. ಅವಿಶೀ ಸಿನ್ಹಾ ಮತ್ತು ಡಾ. ಪಾಟೀಲ ಸಂದೇಶ್ ನಿತಿನ್ ತಲಾ 4ನೇ ರ‍್ಯಾಂಕ್ ಹಾಗೂ ಡಾ. ಕೊ ಟ್ರೇಶ್ ಹಿರೇಮಠ್ 5ನೇ ರ‍್ಯಾಂಕ್ ಪಡೆದಿದ್ದಾರೆ.


ಎಂ.ಡಿ. ಯೋಗ ವಿಭಾಗದಲ್ಲಿ, ಡಾ. ಅವನಿ ವೆಣುಗೋಪಾಲ್ ಮತ್ತು ಡಾ. ಹರಿಣಿ ಆರ್ ತಲಾ 1ನೇ ರ‍್ಯಾಂಕ್ ಗಳಿಸಿದ್ದಾರೆ. ಡಾ. ಮಹೇಂದ್ರ ಕೆ.ಎಂ. 2ನೇ ರ‍್ಯಾಂಕ್, ಡಾ. ಹೇಮ ಚೈತನ್ಯ ಲತಾ ರೆಡ್ಡಿ ಮತ್ತು ಡಾ. ಲೈಮುಜಾಮ್ ಪ್ರೀತಿ ದೇವಿ ತಲಾ 3ನೇ ರ‍್ಯಾಂಕ್ ಹಾಗೂ ಡಾ. ದಿಶಾ 4ನೇ ರ‍್ಯಾಂಕ್ ಪಡೆದಿದ್ದಾರೆ.

ಎಂ.ಡಿ. ಡಯಟ್ ಮತ್ತು ನ್ಯೂಟ್ರಿಷನ್ ವಿಭಾಗದಲ್ಲಿ, ಡಾ. ಅಭಯ್ ಸಾಯಿ 1ನೇ ರ‍್ಯಾಂಕ್ ಡಾ. ಮೇದಿನಿ ಎಸ್ ಶಿರ್ಸಾಟ್ 2ನೇ ರ‍್ಯಾಂಕ್, ಡಾ. ರೋಷ್ನಿ ಮೊಯಿರಾಂಗ್ತೇಮ್ 3ನೇ ರ‍್ಯಾಂಕ್, ಡಾ. ರೂಪಾ ಎಂ.ಜಿ. 4ನೇ ರ‍್ಯಾಂಕ್ ಮತ್ತು ಡಾ. ದೀಪಾ ಸನಾಸಮ್ 5ನೇ ರ‍್ಯಾಂಕ್ ಗಳಿಸಿದ್ದಾರೆ.

ಇದೇ ವೇಳೆ, ಪದವಿ ಪರೀಕ್ಷೆಯಲ್ಲೂ ಕಾಲೇಜಿನ ವಿದ್ಯಾರ್ಥಿಗಳು ಪ್ರತಿವರ್ಷದಂತೆ ಈ ಬಾರಿಯೂ ಉತ್ತಮ ಸಾಧನೆ ಮಾಡಿದ್ದಾರೆ. ಪ್ರತೀಕ್ಷ ಎಚ್ 2ನೇ ರ‍್ಯಾಂಕ್, ಪ್ರಕೃತಿ ಕೆ 3ನೇ ರ‍್ಯಾಂಕ್, ಪೂಜಾ ಅಗರವಾಲ್ 5ನೇ ರ‍್ಯಾಂಕ್, ಶಿಲ್ಪಾ ವೈ 6ನೇ ರ‍್ಯಾಂಕ್, ಜಿ ಪ್ರಪುಲ್ಲ ತಮಂಕರ್ 8ನೇ ರ‍್ಯಾಂಕ್ ಮತ್ತು ಮಿನ್ನು ಇಸಬೆಲ್ಲಾ ಆಂಟೋನಿ 9ನೇ ರ‍್ಯಾಂಕ್ ಪಡೆದಿದ್ದಾರೆ.

ಎಂ.ಡಿ. ನ್ಯಾಚುರೋಪಥಿ ವಿಭಾಗದಲ್ಲಿ ಡಾ. ಆದಿತಿ ಗಿರಿಧರನ್ ಹಾಗೂ ಎಂ.ಡಿ ಯೋಗ ವಿಭಾಗದಲ್ಲಿ ಡಾ. ಅವನಿ ವೆಣುಗೋಪಾಲ್ ಮತ್ತು ಡಾ. ಹರಿಣಿ ಇವರುಗಳು ಪ್ರತಿಷ್ಠಿತ ಸೀತಾರಾಮ್ ಜಿಂದಾಲ್ ಗೋಲ್ಡ್ ಮೆಡಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು ಮತ್ತು ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ. ಈ ಫಲಿತಾಂಶ ಕಾಲೇಜಿನ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ದೃಢಪಡಿಸಿದೆ.






















Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article