ಸಾಮೂಹಿಕ ವಿವಾಹ ನೋಂದಾವಣಾ ಕಛೇರಿ ಉದ್ಘಾಟನೆ

ಸಾಮೂಹಿಕ ವಿವಾಹ ನೋಂದಾವಣಾ ಕಛೇರಿ ಉದ್ಘಾಟನೆ


ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ 2026ರ ಏಪ್ರಿಲ್ 29 ರಂದು ಸಂಜೆ ಗಂಟೆ 6.40ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದ್ದು, ವಿವಾಹ ನೋಂದಣಿ ಕಛೇರಿಯನ್ನು ಎಸ್.ಡಿ.ಎಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ. ಧರ್ಮೋತ್ಥಾನ ಟ್ರಸ್ಟ್‌ನ ಕಾರ್ಯದರ್ಶಿ ಎ.ವಿ. ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಶ್ರೀನಿವಾಸ ರಾವ್, ರಜಪೂತ, ವಿಕಾಸ್ ಆರಿಗ, ಧರ್ಣಪ್ಪ ಮಾಸ್ಟರ್, ರತ್ನಾವತಿ, ಮೋಹನ್ ಶೆಟ್ಟಿ, ಸಂತೋಷ್ ಹಾಗೂ ಪವಿತ್ರ ಸುನಿಲ್ ಮತ್ತಿತರರು ಉಪಸ್ಥಿತರಿದ್ದರು.

ಸಾಮೂಹಿಕ ವಿವಾಹದ ಎಲ್ಲಾ ವೆಚ್ಚವನ್ನು ಧರ್ಮೋತ್ಥಾನ ಟ್ರಸ್ಟ್ ನಿರ್ವಹಿಸಲಿದ್ದು, ಈ ವರ್ಷ 106 ಜೊತೆ ವಿವಾಹ ನಡೆಯಲಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article