ಏಕರೂಪ ಸಮವಸ್ತ್ರ ನೀತಿ ಪಾಲನೆ ಹಾಗೂ ಬಕ್ರಿದ್ ಗೋಹತ್ಯೆ ತಡೆಗೆ ಆಗ್ರಹ
ಬಂಟ್ವಾಳ: ರಾಜ್ಯದ ಶೈಕ್ಷಣಿಕ ವಾತಾವರಣದಲ್ಲಿ ಸಮಾನತೆ ಕಾಪಾಡುವುದು ಹಾಗೂ ಮುಂಬರುವ ಬಕ್ರೀದ್ ಹಬ್ಬದ ದಿನಗಳಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಬಂಟ್ವಾಳ ತಹಶೀಲ್ದಾರರ ಮೂಲಕ ಕರ್ನಾಟಕ ಸರ್ಕಾರದ ಶಿಕ್ಷಣ ಹಾಗೂ ಗೃಹ ಸಚಿವರಿಗೆ ಪ್ರತ್ಯೇಪ್ರತ್ಯೇಕ ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದೆ.
ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿ, ಕೇಸರಿ ಶಾಲು ಧರಿಸುವುದನ್ನು ನಿರ್ಬಂಧಿಸಿರುವ ಸರ್ಕಾರದ ನಿರ್ಧಾರವು ಸಮಾನತೆ, ಧರ್ಮನಿರಪೇಕ್ಷತೆ ಹಾಗೂ ಏಕರೂಪದ ಸಮವಸ್ತ್ರ ನೀತಿಗೆ ವಿರುದ್ಧವಾಗಿದೆ ಎಂದು ಶಿಕ್ಷಣ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಸಮಿತಿಯು ಕಳವಳ ವ್ಯಕ್ತಪಡಿಸಿದೆ.
ಸಜೀಪ ಮಗಣೆಯ ತಂತ್ರಿ ಸುಬ್ರಹ್ಮಣ್ಯ ಭಟ್, ವಿವಿಧ ಹಿಂದೂ ಪರ ಸಂಘಟನೆಯ ಪ್ರಮುಖರಾದ ರಾಧಾಕೃಷ್ಣ ಅಡ್ಯಂತಾಯ, ಗೋವಿಂದ ಪ್ರಭು, ಪ್ರಭಾಕರ ಪ್ರಭು, ಸುದರ್ಶನ್ ಬಜ, ಪುರುಷೋತ್ತಮ ಸಾಲ್ಯಾನ್, ರತ್ನಾಕರ ಶೆಟ್ಟಿ ಕಲ್ಲಡ್ಕ, ಕೇಶವ ದೈಪಲ, ಜನಾರ್ಧನ ಕುಲಾಲ್, ಪ್ರೇಮನಾಥ್ ಶೆಟ್ಟಿ, ಶೇಖರ್ ಕೊಟ್ಟಾರಿ ಕರಿಂಗಾನ, ದಿನೇಶ್ ಅಮ್ಟೂರು, ಲೋಹಿತ್ ಪಣೋಲಿಬೈಲ್, ತಿರುಲೇಶ್ ಬೆಳ್ಳೂರು, ಸಂತೋಷ್, ಸನತ್ ಕುಮಾರ್ ರೈ, ನಾಗೇಶ್ ಭಂಡಾರಿ, ಅರವಿಂದ ರೈ, ಮಾಧವ ಮಾವೆ, ರಂಜಿತ್, ಲಕಿತಾ ಶೆಟ್ಟಿ, ಹಿರಾಣ್ಯಕ್ಷಿ, ಪ್ರವೀಣ್, ಪುನೀತ್ ಕಲ್ಲಡ್ಕ, ಅಶ್ವಿನಿ, ಆಶ್ವರಾಜ್ ಹಿಂದೂ ಜನಜಾಗೃತಿ ಸಮಿತಿಯ ಪ್ರಣವ್ ಮಲ್ಯ, ಗಿರೀಶ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.