ಭಾಷಾ ಸಾಮರಸ್ಯದ ಮೂಲಕ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಮೇಳೈಸಲಿ: ಬಿ. ರಮಾನಾಥ ರೈ

ಭಾಷಾ ಸಾಮರಸ್ಯದ ಮೂಲಕ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಮೇಳೈಸಲಿ: ಬಿ. ರಮಾನಾಥ ರೈ


ಬಂಟ್ವಾಳ: ಭಾಷಾ ಸಾಮರಸ್ಯದ ಮೂಲಕ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಮೇಳೈಸಲಿ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಶುಭ ಹಾರೈಸಿದರು.

ಅವರು ಮೇ 4ರ ರಾತ್ರಿ ಬಿ.ಸಿ. ರೋಡಿನ ಸ್ಪರ್ಶ ಕಲಾ ಮಂದಿರದ ಕೀರ್ತಿಶೇಷ ಬಿ.ಎ.ಅಹ್ಮದ್ ಹಾಜಿ ಕಲಾ ವೇದಿಕೆಯಲ್ಲಿ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಇದರ ಆಶ್ರಯದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕರ್ನಾಟಕ ಬ್ಯಾರಿ, ತುಳು, ಕೊಂಕಣಿ ಹಾಗೂ ಅರೆಭಾಷಾ ಸಾಹಿತ್ಯ ಆಕಾಡೆಮಿಗಳ ಸಂಯುಕ್ತ ಸಹಕಾರದೊಂದಿಗೆ ಮೇ 4 ರಿಂದ 9ರವರೆಗೆ ನಡೆಯುವ ಕರಾವಳಿ ಕಲೋತ್ಸವ ಬಹು ಸಂಸ್ಕೃತಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತಾಲೂಕು ತಹಶೀಲ್ದಾರ್ ಮಂಜುನಾಥ್ ಅವರು ಜಾನಪದ ದಿಬ್ಬಣ ಹಾಗೂ ಕೀರ್ತಿ ಶೇಷ ಬಿ.ಎ. ಅಹ್ಮದ್ ಹಾಜಿ ಕಲಾ ವೇದಿಕೆಯನ್ನು ಉದ್ಘಾಟಿಸಿದರು. ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆ ವಹಿಸಿದ್ದರು.

ಇದಕ್ಕೂ ಮುನ್ನ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಸ್ಪರ್ಶಾ ಕಲಾಮಂದಿರದ ಕೀರ್ತಿಶೇಷ ಬಿ. ಅಹ್ಮದ್ ಹಾಜಿ ವೇದಿಗೆ ಜಾನಪದ ದಿಬ್ಬಣ ಮೆರವಣಿಗೆಯು ರಾಜ್ಯ ಹಾಗೂ ಹೊರ ರಾಜ್ಯದ ಜಾನಪದ ತಂಡಗ ಪ್ರಸ್ತುತಿಯೊಂದಿಗೆ ಸಾಗಿಬಂತು.

ಇದೇ ವೇಳೆ ಬಂಟ್ವಾಳ ತಾಲೂಕಿನಲ್ಲಿ ಪ್ರಥಮ ಬಾರಿಗೆ ನಡೆದ ಮಹಿಳೆಯರ ಸೀರೆ ನಡಿಗೆ ಸ್ಪರ್ಧೆಯನ್ನು ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ಕಾರಂತ್, ದ.ಕ.ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಶ್ರೀನಾಥ್ ಎಂ.ಪಿ., ಮಾತನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಸ್ಥಾಪಕಾಧ್ಯಕ್ಷ ಮೋಹನ್ ದಾಸ್ ಕೊಟ್ಟಾರಿ ಮುನ್ನೂರು, ಕರಾವಳಿ ಕಲೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಕಾಂತಾಡಿಗುತ್ತು, ಪ್ರಣಿತಾ ಉದಯ ಚೌಟ, ತುಳು ಸಾಹಿತ್ಯ ಸಂಭ್ರಮದ ಅಧ್ಯಕ್ಷ ಬೇಬಿ ಕುಂದರ್, ಬ್ಯಾರಿ ಸಾಹಿತ್ಯ ಸಂಭ್ರಮದ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಕೊಂಕಣಿ ಸಾಹಿತ್ಯ ಸಂಭ್ರಮದ ಅಧ್ಯಕ್ಷ ಪಿಯೂಷ್ ಎಲ್ ರೋಡ್ರಿಗಸ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕಬಡ್ಡಿ ಪಟು ರೋಹಿತ್ ಮಾರ್ಲ ಅವರಿಗೆ ಉದಯ ಚೌಟ ಸಾಧನ ಪ್ರಶಸ್ತಿ. ಸಾಮಾಜಿಕ ಸಂಘಟಕ ಎಲಿಯಾಸ್ ಸಾಂಕ್ರಿಸ್ ಅವರಿಗೆ ಕರಾವಳಿ ಸೌರಭ ರಾಜ್ಯ ಪ್ರಶಸ್ತಿ, ಕರಾಟೆ, ನೃತ್ಯ, ಕ್ರೀಡಾ ಕ್ಷೇತ್ರದ ಸಾಧಕಿ ವಿದ್ಯಾರ್ಥಿನಿ ಸಾನ್ವಿ ಅವರಿಗೆ ಚಿಣ್ಣರ ಸೌರಭ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಚಿಣ್ಣರಲೋಕ ಸೇವಾ ಟ್ರಸ್ಟ್ ಸಂಸ್ಥೆಯ ದತ್ತು ಸ್ವೀಕರಿಸಿದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಕೊಡೆ ವಿತರಿಸಲಾಯಿತು. ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಬಳಿಕ ಚಿಣ್ಣರಲೋಕ ಸೇವಾ ಟ್ರಸ್ಟ್ ಬಂಟ್ವಾಳ ಇದರ ಯಕ್ಷಗಾನ ಗುರುಗಳಾದ ಓಂಪ್ರಕಾಶ್ ರೈ ಕಲ್ಲಡ್ಕ ಇವರು ಶಿಷ್ಯ ವೃಂದದವರಿಂದ ಶ್ರೀ ರಾಮ ದರ್ಶನ ಯಕ್ಷಗಾನ ನಡೆಯಿತು.

ಆಡಳಿತ ಟ್ರಸ್ಟಿ ತೇವು ತಾರಾನಾಥ್ ಕೊಟ್ಟಾರಿ ಪ್ರಾಸ್ತಾವಿಸಿ, ಸ್ವಾಗತಿಸಿದರು. ಶೈಲಜಾ ರಾಜೇಶ್ ವಂದಿಸಿದರು. ಕಲಾವಿದ ಎಚ್ಕೆ ನಯನಾಡು ಹಾಗೂ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article