ಅರ್ಚಕರ ವಸತಿ ಗೃಹ ನಿರ್ಮಾಣಕ್ಕೆ ಭೂಮಿ ಪೂಜೆ
Sunday, May 10, 2026
ಬಂಟ್ವಾಳ: ಸಜಿಪಮೂಡ ಗ್ರಾಮದ ಅನ್ನಪ್ಪಾಡಿ ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಅರ್ಚಕರ ವಸತಿ ಗ್ರಹ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಮಣ್ಯ ಭಟ್ ಅವರ ಮಾರ್ಗದರ್ಶನದಲ್ಲಿ ಅರ್ಚಕ ಶ್ರೀನಿವಾಸ ಶಿವತ್ತಾಯ ಅವರ ಪೌರೋಹಿತ್ಯದಲ್ಲಿ ವೈಧಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆಗುತ್ತು, ಪ್ರಮುಖರಾದ ಎಸ್. ಶ್ರೀಕಾಂತ್ ಶೆಟ್ಟಿ, ದಾಮೋದರ ಶೆಟ್ಟಿ, ಚಿನ್ನಯ್ಯ ಸಾಲಿಯಾನ್, ಪ್ರೇಮ ಜಿ. ಶೆಟ್ಟಿ, ಪದಾಧಿಕಾರಿಗಳಾದ ಲಿಂಗಪ್ಪ ದೋಟ, ಸುರೇಶ ಬಂಗೇರ, ವಿಶ್ವನಾಥ ಬೆಳ್ಚಡ, ಸುರೇಶ್ ಪೂಜಾರಿ, ದೇವದಾಸ, ಪಂಚಾಯತ್ ಸದಸ್ಯ ವಿಜಯ. ಕುಶೇಷ ಅನ್ನ ಪಾಡಿ, ಯೋಗೀಶ ಬೆಳ್ಚಡ, ಗಿರೀಶ್ ಕುಮಾರ್, ನಿತಿನ್, ಅರಸ ಭಾಸ್ಕರ, ಜಯಪ್ರಕಾಶ್, ಶಂಕರ ದೋಟ ಮತ್ತಿತರರು ಉಪಸ್ಥಿತರಿದ್ದರು.
