‘ಕರಾವಳಿ ಕಲೋತ್ಸವ, ಬಹುಸಂಸ್ಕೃತಿ ಉತ್ಸವ’ ಸಂಪನ್ನ
ಮಾಣಿ ಗ್ರಾ.ಪಂ. ನಿಕಟ ಪೂರ್ವ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾತನಾಡಿ, ಕಳೆದ ಹಲವು ವರ್ಷದಿಂದ ಕರಾವಳಿ ಕಲೋತ್ಸವ ಅತ್ಯಂತ ಯಶಸ್ವಿಯಾಗಿ ನಡೆಯುತ್ತಾ ಬಂದಿದ್ದು, ಮೋಹನ್ ದಾಸ್ ಕೊಟ್ಟಾರಿ ಅವರ ಮೂಲಕ ಸಂಸ್ಥೆಯ ಕಾರ್ಯಕ್ರಮ ಅದ್ವಿತೀಯವಾಗಿದೆ ಎಂದರು.
ಸಂಸ್ಥೆಯ ಸಂಚಾಲಕ ಮೋಹನ್ ದಾಸ್ ಕೊಟ್ಟಾರಿ ಮಾತನಾಡಿ, ಕರಾವಳಿ ಕಲೋತ್ಸವ ಅತ್ಯಂತ ಯಶಸ್ವಿಯಾಗಿ ನೆರವೇರಿದ್ದು, ಈ ಬಾರಿ ತುಳು, ಕೊಂಕಣಿ, ಬ್ಯಾರಿ ಸಹಿತ ವಿವಿಧ ಅಕಾಡೆಮಿಗಳ ಸಹಯೋಗದೊಂದಿಗೆ ಬಹುಸಂಸ್ಕೃತಿ ಉತ್ಸವವು ನಿರೀಕ್ಷೆಗೂ ಮೀರಿ ಯಶಸ್ಸು ದಾಖಲಿಸಿದೆ ಎಂದರು.
ಇದೇ ವೇಳೆ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪ್ರಮುಖರನ್ನು ಇದೇ ವೇಳೆ ಸಮ್ಮಾನಿಸಲಾಯಿತು.
ಸ್ವಾಗತ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಸಮಿತಿ ಪದಾಧಿಕಾರಿಗಳಾದ ಚಿತ್ತರಂಜನ್ ಶೆಟ್ಟಿ ಬೊಂಡಾಲ, ವಿಶ್ವನಾಥ್, ರಾಜೇಶ್ ಮೆಂಡನ್, ಮೋನಪ್ಪ ಪೂಜಾರಿ, ಸರಪಾಡಿ ಅಶೋಕ್ ಶೆಟ್ಟಿ, ಅಬ್ದುಲ್ ರಝಾಕ್ ಕುಕ್ಕಾಜೆ, ದೇವಪ್ಪ ಕುಲಾಲ್ ಪಂಜಿಕಲ್ಲು, ಪದ್ಮನಾಭ ಗೌಡ, ವಿಜಯ್ ಕುಮಾರ್ ಅಡ್ಯಾರ್, ಮಾಧವ ಕರ್ಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.