ಸಂಪರ್ಕದ ಸೇತುವಾಗಿ ಧಾರ್ಮಿಕ ಕೇಂದ್ರಗಳು ಕೆಲಸ ಮಾಡಬೇಕು: ಸುನಿಲ್ ಕೆ.ಆರ್.
ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ನೀರಪಾದೆ ಎಂಬಲ್ಲಿ ಪುನರ್ ನಿರ್ಮಾಣಗೊಂಡ ನೂತನ ಬ್ರಹ್ಮ ಶ್ರೀ ನಾರಾಯಣ ಗುರುಮಂದಿರ ಲೋಕಾರ್ಪಣೆ ಮತ್ತು ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ ಮೂರ್ತಿ ಪ್ರತಿಷ್ಠಾ ಸಾನಿಧ್ಯ ಕಲಶಾಭಿಷೇಕ ಕಾರ್ಯಕ್ರಮದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣ ಗುರು ಮಂದಿರಗಳು ಸಂಸ್ಕಾರವನ್ನು ಕಲಿಸುವ ಕೇಂದ್ರಗಳಾದಾಗ ಅವರ ಯೋಚನೆ, ಚಿಂತನೆ, ಹೋರಾಟ, ತತ್ವ ಸಿದ್ದಾಂತಗಳಿಗೆ ಗೌರವಿಸಿದಂತಾಗುತ್ತದೆ ಎಂದ ಅವರು ಭಜನೆಯ ಮೂಲಕ ಹಿಂದೂ ಸಮಾಜವನ್ನು ಒಟ್ಟುಗೂಡಿಸುವ ಕಾರ್ಯಗಳು ನಡೆಯಲಿ ಎಂದು ಆಶಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಯೋಧರಾದ ಡೀಕಯ್ಯ ಪೂಜಾರಿ ಮಾತನಾಡಿ, ಬಾಳ್ತಿಲ ಗ್ರಾಮದಲ್ಲಿ ನಡೆಯುವ ಪ್ರತಿ ಧಾರ್ಮಿಕ ಕಾರ್ಯಕ್ರಮಗಳಿಗೆ ಮಂದಿರ ಕೇಂದ್ರವಾಗಿ ಮೂಡಿಬರಲಿದೆ ಎಂದರು.
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ಚರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಬ್ರಹ್ಮ ಶ್ರೀ ನಾರಾಯಣ ಗುರುಗಳು ಶೋಷಿತ ಸಮಾಜದ ಏಳಿಗೆಗೆ ಶ್ರಮಿಸಿದ ಮಹಾನ್ ಚೇತನ ಎಂದು ಅವರು ತಿಳಿಸಿದರು.
ಜವಾಹರ ಬಾಲಮಂಚ್‌ನ ಜಿಲ್ಲಾಧ್ಯಕ್ಷೆ ಶೈಲಜಾ ರಾಜೇಶ್, ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ.ದ ಅಧ್ಯಕ್ಷ ನಾಗೇಶ್ ಕಲ್ಲಡ್ಕ ಅವರು ಮಾತನಾಡಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ ನಿಡ್ಯ, ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್‌ನ ಆಧ್ಯಕ್ಷ ಎ.ರುಕ್ಮಯ ಪೂಜಾರಿ, ಕಾರ್ಯದರ್ಶಿ ಮೋಹನ್ ಪಿ.ಎಸ್. ಬರಿಮಾರು ಮಹಾಮ್ಮಾಯಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ರಾಕೇಶ್ ಪ್ರಭು, ನೀರಪಾದೆ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕುಮಾರ್ ಕೆ. ಕಾಂದಿಲ, ಸಮರ್ಪಣಾ ಟ್ರಸ್ಟ್ ವಿಟ್ಲ ಇದರ ಅಧ್ಯಕ್ಷ ಯಶವಂತ ಎನ್. ಪೂಜಾರಿ, ಕಶೆಕೋಡಿ ಶ್ರೀ ಲಕ್ಮೀ ವೆಂಕಟರಮಣ ದೇವಸ್ಥಾನದ ಅನುವಂಶಿಕ ಅಡಳಿತ ಮೊಕ್ತೇಸರ ಗೋಪಾಲ ಶೆಣೈ ಕಂಟೀಕ, ಎ.ಪಿ.ಎಂ.ಸಿ. ಮಾಜಿ ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ ಕೋರ್ಯ, ಉದ್ಯಮಿ ತುಳಸಿದಾಸ್ ಮಂಗಳೂರು, ನರಿಕೊಂಬು ಗ್ರಾಮಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಸಂತೋಷ್ ನರಿಕೊಂಬು ಹಾಗೂ ಟ್ರಸ್ಟ್ ಮತ್ತು ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಶರತ್ ಕುಮಾರ್ ಸ್ವಾಗತಿಸಿ, ಜತೆ ಕಾರ್ಯದರ್ಶಿ ಚಂದ್ರಶೇಖರ ಪೂಜಾರಿ ವಂದಿಸಿದರು. ಗ್ರಾ.ಪಂ. ಮಾಜಿ ಸದಸ್ಯ ರಾಜೇಶ್ ಕೊಟ್ಟಾರಿ ಹಾಗೂ ಶಿಕ್ಷಕ ಸಂತೋಷ್ ಕುಮಾರ್ ನಿರೂಪಿಸಿದರು.
ಬಳಿಕ ಸ್ಥಳೀಯ ಅಂಗನವಾಡಿ ಮಕ್ಕಳಿಂದ ಮತ್ತು ಇತರ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸ್ಥಳೀಯ ಕಲಾವಿದರಿಂದ ನಾಟಕ ಪ್ರದರ್ಶನಗೊಂಡಿತು.