ಮಹಿಳೆ ನೇಣು ಬಿಗಿದು ಆತ್ಮಹತ್ಯೆ
Saturday, May 9, 2026
ಬಂಟ್ವಾಳ: ಮಾಲಾಡಿ ಗ್ರಾಮದ ಕುರಿಯಾಡಿ ಬೈಲು ನಿವಾಸಿ ಶ್ರೀಧರ ದಾಸ್ ಅವರ ಪತ್ನಿ ಜಯಂತಿ (50) ಅವರು ನೇಣು ಬಗಿದು ಆತ್ಮಹತ್ಯೆ ಗೈದ ಘಟನೆ ಸಂಭವಿಸಿದೆ.
ಜಯಂತಿ ಅವರು ಶ್ರೀಧರ ದಾಸ್ ಅವರ ತಮ್ಮ ದಿ. ವಾಸುದಾಸ್ ಅವರ ತಾರದಡ್ಡು ಎಂಬಲ್ಲಿರುವ ಪಾಳುಬಿದ್ದ ಮನೆಯ ಎದುರಿನ ಜಗಲಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿದ್ದಾರೆ.
ಯಾವುದೋ ಕೊರಗಿನಿಂದ ಇಲ್ಲವೇ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆಗೈದಿರಬೇಕೆಂದು ಶಂಕಿಸಲಾಗಿದೆ. ಈ ಬಗ್ಗೆ ಶ್ರೀಧರ ದಾಸ್ ಅವರು ನೀಡಿದ ದೂರಿನಂತೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.