ನಿಯಂತ್ರಣ ತಪ್ಪಿ ಮೈಲು ಕಲ್ಲಿಗೆ ಹೊಡೆದ ಮಾರುತಿ 800 ಕಾರು
Saturday, May 9, 2026
ಸುಬ್ರಮಣ್ಯ: ಸುಳ್ಯದಿಂದ ಎಂಗೇಜ್ಮೆಂಟ್ ಮುಗಿಸಿ ನಡುಗಲ್ಲು ಕಡೆಗೆ ಬರುತಿದ್ದ ಪಾನಾತ್ತಿಲದ ವ್ಯಕ್ತಿಗೆ ಸೇರಿದ ಮಾರುತಿ 800 ಕಾರೊಂದು ನಡುಗಲ್ಲು ಬಳಿ ನಿಯಂತ್ರಣ ತಪ್ಪಿ ಮೈಲು ಕಲ್ಲಿಗೆ ಹೊಡೆದ ಪರಿಣಾಮ ಕಾರು ಮಗುಚಿ ಸಂಪೂರ್ಣ ನಜ್ಜುಗುಜ್ಜಗಿದೆ.
ಕಾರಿನಲ್ಲಿದ್ದ ವಿಮಲ (55), ಚೈತ್ರ(30), ಶ್ರುತಿ (27) ಹಾಗೂ ಕಾರು ಚಾಲಕ ಉಮೇಶ್ ಅವರಿಗೆ ಸಣ್ಣ ಪುಟ್ಟ ಗಾಯಗೊಂಡಿದ್ದಾರೆ.
ಹಿಂದಿನಿಂದ ಬರುತಿದ್ದ ಛಾಯಾಗ್ರಾಹಕ ಸಂತೋಷ್ ಸುಬ್ರಮಣ್ಯ ಪ್ರತ್ಯಕ್ಷವಾಗಿ ಘಟನೆಯನ್ನು ಕಂಡಿದ್ದು, ಗಾಯಳಗಳನ್ನು ಛಾಯಾಗ್ರಾಹ, ಜೆಪಿ ಕಜ್ಜೋಡಿ, ಸ್ಥಳದಲ್ಲಿದ್ದ ತೀಕ್ಷಣ್ ಶೆಟ್ಟಿಯಡ್ಕ, ವಿವೇಕ್ ಕೊಲ್ಲಮುಗ್ರಾ, ನವೀನ್ ಬಾಳುಗೂಡು ಹಾಗೂ ಅನೇಕರು ನೆರೆದಿದ್ದು ಗಾಯಳುಗಳನ್ನು ಸುಳ್ಳ ಕೆವಿಜಿ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಸಾಗಿಸಲಾಯಿತು.