ಅಕ್ರಮ ಜೂಜಾಟ: 17 ಮಂದಿ ಸೆರೆ
ಬೆಳ್ತಂಗಡಿ: ಅಕ್ರಮ ಜೂಜಾಟ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ವೇಣೂರು ಪೊಲೀಸರು 17 ಮಂದಿಯನ್ನು ಬಂಧಿಸಿರುವ ಘಟನೆ ಕರಿಮಣೇಲು ಗ್ರಾಮದ ಬೋಳಾರಗುತ್ತು ಎಂಬಲ್ಲಿ ಮೇ.17 ರಂದು ರಾತ್ರಿ ನಡೆದಿದೆ.
ಪಡಂಗಡಿಯ ಅಶೋಕ್(37) ,ವಿತೇಶ್(33), ವೇಣೂರು ಕರಿಮಣೇಲಿನ ರಾಜೇಶ್(35), ಕತ್ತೋಡಿಬೈಲಿನ ರಮೇಶ್(40) , ಕುಕ್ಕೇಡಿ ಬರ್ನತ್ಯಾರಿನ ರಾಜೇಶ್(42), ಕಾರ್ಕಳ ಮುಗಿರಡ್ಡಸ ಪ್ರಮೀತ್(35), ನಾರಾವಿ ಅರಸಿಕಟ್ಟೆಯ ಕರುಣಾಕರ(38), ವೇಣೂರು ಶಿವಾಜಿನಗರದ ಶೇಖರ್(50), ಮರೋಡಿಯ ಸಧಾಕರ(42), ಗರ್ಡಾಡಿಯ ನವಾಝ್(26), ಗೇರುಕಟ್ಟೆ ಜನತಾಕಾಲೋನಿಯ ಇಕ್ಬಾಲ್(37), ಕುಕ್ಕೇಡಿಯ ಕಿರಣ್(35), ವೇಣೂರು ಶಿವಾಜಿನಗರದ ಲಕ್ಷ್ಮಣ(51), ಬೆಳ್ತಂಗಡಿ ಲಾಯಿಲದ ನಿಸಾರ್(47), ಬೆಳ್ತಂಗಡಿ ತೆಂಕಎಡಪದವು ಜೀವಂಧರ್ ಕುಮಾರ್(36), ಗುರುವಾಯನಕೆರೆಯ ಸಂತೋಷ್(37), ಸೊಣಂದೂರು ಅಬ್ದುಲ್ ಅಝೀಝ್(40) ಬಂಧಿತ ಆರೋಪಿಗಳು.
ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಬಗ್ಗೆ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಕ್ಷಯ್ ಡವಗಿ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಮೇ.17 ರಂದು ರಾತ್ರಿ 7.30 ಕ್ಕೆ ದಾಳಿ ಮಾಡಿದ್ದಾರೆ.
ಆರೋಪಿಗಳು ಜೂಜಾಟಕ್ಕೆ ಬಳಸಿದ್ದ 69 ಸಾವಿರ ರೂಪಾಯಿ ಹಣ , ಎರಡು ಆಟೋ ರಿಕ್ಷಾ, 20 ಮೊಬೈಲ್ ಫೋನ್ ವಶಪಡಿಸಿಕೊಂಡು ವೇಣೂರು ಪೊಲೀಸ್ ಠಾಣೆಯಲ್ಲಿ 17 ಮಂದಿ ಆರೋಪಿಗಳ ವಿರುದ್ಧ ಕಲಂ 87 ಕೆ.ಪಿ.ಆಕ್ಟ್ ಹಾಗೂ 112 BNS ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.