ನೀರಿನ ಟ್ಯಾಂಕರ್‌ಗೆ ಸ್ಕೂಟರ್ ಢಿಕ್ಕಿ: ಸಾವು
Tuesday, May 19, 2026
ಕಾಪು: ನೀರಿನ ಟ್ಯಾಂಕರ್‌ಗೆ ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಕಾಪು ಪಣಿಯೂರ್‌ನಲ್ಲಿ ಇಂದು ಸಂಭವಿಸಿದೆ. ಮೃತರನ್ನು ಪಣಿಯೂರು ಕೇಂದ್ರದ ನಿವಾಸಿ ಕೃಷ್ಣ ಮೂಲ್ಯ (22) ಎಂದು ಗುರುತಿಸಲಾಗಿದೆ.
ಯುವಕ ಹಾಲು ಖರೀದಿಸಲು ಹೋಗಿ ತನ್ನ ಸ್ಕೂಟರ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.