ಕಟೀಲು ದೇಗುಲ: 42 ಕೋಟಿ ರೂಪಾಯಿ ಆದಾಯ
ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ 2025-26ನೇ ಸಾಲಿನಲ್ಲಿ ರೂಪಾಯಿ 42,49, 09, 173 ಆದಾಯ ಕಂಡಿದೆ.
ಇದರಲ್ಲಿ ಒಟ್ಟು 36,99,30,366 ರೂ ವ್ಯಯಿಸಲಾಗಿದ್ದು, ರೂ. 5,49,78,807 ಉಳಿಕೆಯಾಗಿದೆ. ದೇವಳದಲ್ಲಿನ ವಿವಿಧ ಸೇವೆಗಳಿಂದ 15,37,78,807 ಆದಾಯ ಬಂದಿದೆ. ಗೋಗ್ರಾಸ ಗೋದಾನ ಇತ್ಯಾದಿ ಸೇವೆಗಳಿಂದ 72,25,377 ರೂ, ಅನ್ನದಾನ ವಿದ್ಯಾದಾನಕಾಣಿಕೆಯಿಂದ 6,46,19,166 ರೂ. ಹುಂಡಿ ಕಾಣಿಕೆಗಳಿಂದ 6,98,05,776 ರೂ, ಯಕ್ಷಗಾನ ಮೇಳಗಳ ಕಾಣಿಕೆಯಿಂದ 2,14,04.730 ರೂ. ಆದಾಯ ಬಂದಿದೆ.
ನೌಕರರ ವೇತನಕ್ಕೆ 7,12,13,951, ಸೇವೆ ಆರಾಧನೆಗಾಗಿ 4,54,50.865 ರೂ. ಅನ್ನದಾನಕ್ಕಾಗಿ 6,73,70,770 ರೂ, ಶಾಲಾ ಮಕ್ಕಳ ಬಿಸಿಯೂಟಕ್ಕಾಗಿ 9,27,354 ರೂ, ಉತ್ಸವದ ಖರ್ಚು 1,18,88,827 ರೂ, ವಿದ್ಯಾಸಂಸ್ಥೆಗಳಿಗೆ 6,43,18,719 ರೂ. ಗೋಸೇವೆಗಾಗಿ 90,67,700 ರೂ. ಹೀಗೆ ಒಟ್ಟು 36,99,30,366 ಖರ್ಚಾಗಿದೆ.
ಈ ವರುಷ ನಂದಿನಿ ನದಿಗೆ ತಡೆಗೋಡೆ, ಕಾಂಕ್ರೀಟು ರಸ್ತೆ, ಸಿತ್ಲದಲ್ಲಿ ಎರಡು ಎಕರೆ ಅರವತ್ತು ಸೆಂಟ್ಸ್‌ಗೆ ಇಂಟರ್‌ಲಾಕ್ ಅಳವಡಿಕೆ, ಚಾಮುಂಡಿ ಗುಡಿಗೆ ಮೆಟ್ಟಿಲು ನಿರ್ಮಾಣ, ಅನ್ನಪೂರ್ಣ ಅಡುಗೆ ಶಾಲೆ, ಭ್ರಾಮರಿ ವಸತಿ ಗೃಹದ ಬಳಿ ಶೌಚಾಲಯಗಳ ನಿರ್ಮಾಣ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ.