ಕಟೀಲಿನಲ್ಲಿ ಇಂದು 72 ಸರಳ ವಿವಾಹ

ಕಟೀಲಿನಲ್ಲಿ ಇಂದು 72 ಸರಳ ವಿವಾಹ


ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮೇ.10 ರಂದು 72 ಸರಳ ವಿವಾಹ ನಡೆಯಿತು.

ಕಟೀಲು ದೇವಿಯ ಸನ್ನಿಧಿಯಲ್ಲಿ ಮದುವೆ ಆಗುತ್ತೇವೆಂದು ಹರಕೆ ಹೇಳಿಕೊಳ್ಳುವವರು ಭಕ್ತಿಯಿಂದ ಇಚ್ಛಿಸಿದವರು ಅತ್ಯಂತ ಸರಳ ರೀತಿಯಲ್ಲಿ ವಿವಾಹ ಆಗುತ್ತಾರೆ. 50, 60 ಹೀಗೆ ಅನೇಕ ಮದುವೆಗಳು ಆಗುತ್ತಿದ್ದು, ಭಾನುವಾರ ನಡೆದ ಮದುವೆಗಳ ಸಂಖ್ಯೆ ಈ ವರುಷದ ಅತ್ಯಂತ ಹೆಚ್ಚು ಸಂಖ್ಯೆಯಾಗಿದೆ.

ವರುಷದಿಂದ ವರುಷ ಕಟೀಲು ದೇಗುಲದಲ್ಲಿ ವಿವಾಹ ಆಗುವವರ ಸಂಖ್ಯೆ ಹೆಚ್ಚುತ್ತಿದೆ.

ವ್ಯವಸ್ಥಿತ ರೀತಿಯಲ್ಲಿ ಮದುವೆಯಾಗಲು ಅಥವಾ ಮದುವೆ ವ್ಯವಸ್ಥೆಯನ್ನು ಇನ್ನಷ್ಟು ವ್ಯವಸ್ಥಿತ ರೀತಿಯಲ್ಲಿ ಮಾಡಲು ದೇಗುಲದ ಆಡಳಿತ ಮಂಡಳಿ ಸಿದ್ಧವಾಗಬೇಕಾಗಿದೆ.

ವಾಹನಗಳ ಬ್ಲಾಕ್ ಹೆಚ್ಚುತ್ತಿದ್ದು ಕಿಲೋಮೀಟರ್ ಗಟ್ಟಲೇ ವಾಹನಗಳು ನಿಲ್ಲುತ್ತಿವೆ. ಅನೇಕರು ರಸ್ತೆಯ ಬದಿಗಳಲ್ಲಿ ವಾಹನ ನಿಲ್ಲಿಸುವ ಪರಿಣಾಮ ಬ್ಲಾಕ್ ಮತ್ತಷ್ಟು ಹೆಚ್ಚುತ್ತಿದ್ದು ಸಮಸ್ಯೆ ಆಗುತ್ತಿದೆ. ನಂದಿನಿ ನದಿಯ ಸೇತುವೆಯನ್ನು ಅಗಲ ಗೊಳಿಸುವುದು ರಸ್ತೆಯ ಅಗಲದ ಅಗತ್ಯ ಇದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article