ತಾಯಿ-ಮಗು ನಾಪತ್ತೆ

ತಾಯಿ-ಮಗು ನಾಪತ್ತೆ


ಮಂಗಳೂರು: ಬಳ್ಳಾರಿ ಮೂಲದ ರಕ್ಷಿತಾ ಎಂ. (21) ಎಂಬವರು  ಪ್ರಸ್ತುತ ನಗರದ ಬಂಗ್ರ ಕೂಳೂರು ದಂಬೆಲ್‍ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಮೇ 9 ರಂದು ತನ್ನ ಮಗ ಆದರ್ಶ್(1)ನೊಂದಿಗೆ ಮನೆಯಿಂದ ಹೋದವರು ಈವರೆಗೆ ಮನೆಗೂ ಬಾರದೇ ಕಾಣೆಯಾಗಿರುವ ಪ್ರಕರಣ ಕಾವೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.  

ಕಾಣೆಯಾದವರ ಚಹರೆ: 

ಎತ್ತರ ಸುಮಾರು 5.0 ಅಡಿ, ಸಾಧಾರಣ ಶರೀರ, ಕೋಲು ಮುಖ ಬಲ ಕೈಯಲ್ಲಿ A ಎಂಬ ಹಚ್ಚೆ ಗುರುತು ಇರುತ್ತದೆ. ಲಂಬಾಣಿ, ಕನ್ನಡ ಭಾಷೆ ಮಾತನಾಡುತ್ತಾರೆ.

ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಕಾವೂರು ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article