ಎಸ್‌ಐಆರ್ ವಿರುದ್ಧ ಕಾನೂನಾತ್ಮಕ ಹೋರಾಟ: ಸಚಿವ ದಿನೇಶ್ ಗುಂಡೂರಾವ್

ಎಸ್‌ಐಆರ್ ವಿರುದ್ಧ ಕಾನೂನಾತ್ಮಕ ಹೋರಾಟ: ಸಚಿವ ದಿನೇಶ್ ಗುಂಡೂರಾವ್


ಮಂಗಳೂರು: ಎಸ್‌ಐಆರ್‌ನಿಂದ ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ಮಂದಿ ಮತದಾನದ ಹಕ್ಕನ್ನು ಕಳೆದುಕೊಂಡಿರುವುದನ್ನು ನೋಡಿದ್ದೇವೆ. ಹಾಗಾಗಿ ಕರ್ನಾಟಕದಿಂದ ಎಸ್‌ಐಆರ್ ವಿರುದ್ಧ ಕಾನೂನಾತ್ಮಕ ಹೋರಾಟ ಮುಂದುವರಿಯಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಪಶ್ಚಿಮ ಬಂಗಾಳದಲ್ಲಿ ಯಾವುದೋ ಎಐ ಆಧರಿತ ಸಾಫ್ಟ್‌ವೇರ್ ಉಪಯೋಗಿಸಿಕೊಂಡು ಯಾರ ಮತಗಳನ್ನು ತೆಗೆಯಬೇಕೋ ಅದನ್ನು ತೆಗೆಯುವ ಕೆಲಸ ಆಗಿದೆ. ಅದಕ್ಕೆ ಅವಕಾಶ ಆಗಬಾರದು. ಬಿಹಾರದಲ್ಲಿ ಸಾಫ್ಟ್‌ವೇರ್ ಇರಲಿಲ್ಲ. ಅದನ್ನು ಪಶ್ಚಿಮ ಬಂಗಾಳದಲ್ಲಿ ಬಳಸಿದರು. ಕರ್ನಾಟಕದಲ್ಲಿ, ಪಂಜಾಬ್‌ನಲ್ಲಿ ಏನು ಮಾಡುತ್ತಾರೋ ಗೊತ್ತಿಲ್ಲ. ಮುಖ್ಯ ಚುನಾವಣಾ ಆಯೋಗಕ್ಕೆ ಪರಮಾಧಿಕಾರ ನೀಡಲಾಗಿದೆ. ಕೋರ್ಟ್‌ಗಳು ಕೂಡಾ ಚುನಾವಣಾ ಆಯೋಗವನ್ನು ಪ್ರಶ್ನಿಸುವಂತಿಲ್ಲ. ಅಂತಹ ಕಾನೂನು ತರಲಾಗಿದೆ. ಚುನಾವಣಾ ಆಯೋಗದ ನೇಮಕಾತಿಯಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಧೀಶರನ್ನು ಯಾಕೆ ತೆಗೆದುಹಾಕಲಾಗಿದೆ. ಅಷ್ಟೊಂದು ಮುಕ್ತವಾಗಿ ಪಕ್ಷಪಾತ ಮಾಡಲಾಗುತ್ತಿದೆ. ಚುನಾವಣಾ ಆಯೋಗ, ಐಟಿ, ಇಡಿಯನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ರಾಜ್ಯಕ್ಕೆ ಸಿಇಟಿ ಬಿಟ್ಟು ಬಿಡಿ..

ರಾಜ್ಯದಲ್ಲಿ ನೀಟ್ ಬದಲು ಸಿಇಟಿ ಜಾರಿ ಚರ್ಚೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ಸಾಕಷ್ಟು ಬಾರಿ ಹಗರಣ ನಡೆದಿದೆ. ದೇಶದ ಮಕ್ಕಳ ಭವಿಷ್ಯದಲ್ಲಿ ಕೇಂದ್ರ ಸರ್ಕಾರ ಚೆಲ್ಲಾಟ ಆಡುತ್ತಿದೆ. ನಮ್ಮಲ್ಲಿ ಸಿಇಟಿ ಇದ್ದಾಗ ಈ ರೀತಿ ತೊಂದರೆ ಆಗುತ್ತಿರಲಿಲ್ಲ. ನಮ್ಮ ರಾಜ್ಯದ ಮಕ್ಕಳ ಹಿತರಕ್ಷಣೆ ಕಾಯುವ ಎಲ್ಲ ಶಕ್ತಿ ನಮಗಿದೆ. ಎಲ್ಲವನ್ನೂ ಯಾಕೆ ಕೇಂದ್ರಿಕೃತ ಮಾಡಬೇಕು? ಪ್ರತಿಯೊಂದು ದೆಹಲಿ ನಿಯಂತ್ರಣ ಯಾಕೆ? ನಾವು ರಾಜ್ಯ ಇಟ್ಟುಕೊಂಡು ಯಾಕೆ ಇಲ್ಲಿ ಇದ್ದೇವೆ.? ಗೊತ್ತಾಗದೆ ಎಷ್ಟು ಹಗರಣ ನಡೆದಿದೆ ಗೊತ್ತಿಲ್ಲ, ಸಿಇಟಿಯನ್ನು ರಾಜ್ಯಕ್ಕೆ ಬಿಟ್ಟು ಬಿಡಿ ಎಂದು ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article