ಶೈಕ್ಷಣಿಕ ವಲಯದಲ್ಲೂ ಕಾಂಗ್ರೆಸ್‌ಗೆ ವಿಭಜನೆಯೇ ಅಜೆಂಡಾ: ಶಾಸಕ ಡಾ. ಭರತ್ ಶೆಟ್ಟಿ ಕಿಡಿ
“ಹಿಂದಿನ ಬಿಜೆಪಿ ಸರ್ಕಾರ ವಿದ್ಯಾರ್ಥಿಗಳಲ್ಲಿ ಜಾತಿ-ಮತದ ಭೇದ ತೊಡೆದು ಒಗ್ಗಟ್ಟಿನ ಭಾವನೆ ಬೆಳೆಯಲಿ ಎಂಬ ಉದ್ದೇಶದಿಂದ ಕಟ್ಟುನಿಟ್ಟಿನ ಸಮವಸ್ತ್ರ ನಿಯಮ ಜಾರಿಗೊಳಿಸಿತ್ತು. ಕಾಂಗ್ರೆಸ್ ಸರ್ಕಾರ ಅದನ್ನು ಕಿತ್ತುಹಾಕಿ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿದೆ, ಕಾಂಗ್ರೆಸ್ ಸಮಾನತೆಯ ಟೊಳ್ಳು ಹೇಳಿಕೆ ನೀಡುತ್ತಾ ದೇಶದ ಏಕತೆಗೆ ಗಂಭೀರ ಸರಿ ಪಡಿಸಲಾಗದ ಹಾನಿ ಮಾಡುತ್ತಿದೆ.
ಹಿಜಾಬ್ ವಿವಾದ ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥವಾಗದಿರುವಾಗಲೇ ನಿಷೇಧ ಹಿಂಪಡೆದಿರುವುದು ನ್ಯಾಯಾಂಗ ವ್ಯವಸ್ಥೆಗೆ ಅವಮಾನ. ಬ್ರಿಟೀಷರ ಹಳೆಯ ಒಡೆದು ಆಳುವ ತಂತ್ರವನ್ನೇ ಅಧಿಕಾರಕ್ಕಾಗಿ ಕಾಂಗ್ರೆಸ್ ಇದೀಗ ಮಾಡುತ್ತಿದೆ.
ದೇಶಾದ್ಯಂತ ಜನವಿಶ್ವಾಸ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಕನಿಷ್ಠ ಕರ್ನಾಟಕದಲ್ಲಾದರೂ ತನ್ನ ಮರ್ಯಾದೆ ಉಳಿಸಿ ಕೊಳ್ಳಲು ಹಿಜಾಬ್, ಎಸ್.ಐ.ಆರ್., ಅಲ್ಪ ಸಂಖ್ಯಾತರ ಮೇಲಿನ ಕೇಸ್ ವಾಪಸ್ ನಂತಹ ಓಟ್ ಬ್ಯಾಂಕ್ ರಾಜಕಾರಣ ಆರಂಭಿಸಿದೆ.
ರಾಜ್ಯದಲ್ಲಿ ಅಭಿವೃದ್ಧಿ, ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿ ಇದೀಗ ಇಂತಹ ನೀಚ ಕೃತ್ಯಕ್ಕೆ ಕೈ ಹಾಕಿದೆ ಎಂದು ಡಾ. ಭರತ್ ಶೆಟ್ಟಿ ಪ್ರಕಟಣೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.