ಒಬ್ಬರು-ಇಬ್ಬರ ಮಾತಿಗೆ ಪ್ರಾಮುಖ್ಯತೆ ನೀಡಬೇಡಿ: ಸ್ಪೀಕರ್
ಅವರು ಇಂದು ನಗರದ ಸರ್ಕಿಟ್‌ಹೌಸ್‌ನಲ್ಲಿ ಮಾಧ್ಯಮದವರು ಕುತ್ತಾರಿನಲ್ಲಿ ಕೊರಗಜ್ಜ ವೃತ್ತಕ್ಕೆ ವಿರೋಧ ಪಡಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಕುತ್ತಾರಿನಲ್ಲಿರುವ ಕೊರಗಜ್ಜ ವೃತ್ತ ನಾಮಕರಣಕ್ಕೆ ಸ್ಥಳೀಯರ ಯಾವುದೇ ವಿರೋಧವಿಲ್ಲ. ಹೊರಗಿನಿಂದ ಬಂದ ಒಬ್ಬ-ಇಬ್ಬರು ಇದಕ್ಕೆ ವಿರೋಧ ವ್ಯಕ್ತ ಪಡಿಸಿದರೆ ಅದನ್ನು ಪ್ರಮುಖವಾಗಿ ತೆಗೆದುಕೊಳ್ಳಬಾರದು, ಸಾಮಾಜಿಕ ಜಾಲತಾಣಗಳಲ್ಲಿ ಬರುವಂತಹ ವಿಷಯಗಳಿಗೆಲ್ಲ ಹೆಚ್ಚು ಗಮನ ಹರಿಸಲಾಗುವುದಿಲ್ಲ. ದಾರಿ ತಪ್ಪಿದವರನ್ನು ಊರಿನವರು ಸರಿಪಡಿಸುತ್ತಾರೆ. ಸಧ್ಯದಲ್ಲಿಯೇ ಕೊರಗಜ್ಜ ವೃತ್ತ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು.
ಮೆಳೆಯ ಮೊದಲು ಗುಂಡಿ ಮುಚ್ಚಲು ಸೂಚನೆ:
ಮಳೆಗಾಲ ಪ್ರಾರಂಭವಾಗುತ್ತಿದ್ದು, ಪಿಡಬ್ಲ್ಯೂಡಿ ರಸ್ತೆಗಳು, ತಾಲೂಕು ರಸ್ತೆಗಳು, ಜಿಲ್ಲಾ ರಸ್ತೆ ಹಾಗೂ ರಾಜ್ಯ-ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಗಿರುವ ಹೊಂಡ-ಗುಂಡಿಗಳನ್ನು ಮುಚ್ಚಬೇಕು. ಮಳೆ ಪ್ರಾರಮಭವಾದ ಮೇಲೆ ಮೂರು ತಿಂಗಳು ಏನನ್ನೂ ಮಾಡಲಾಗುವುದಿಲ್ಲ. ಅದೂ ಅಲ್ಲದೇ ಆಗ ಡಾಂಬಾರು ಸಿಗುವುದಿಲ್ಲ ಎನ್ನುತ್ತಾರೆ ಈಗ ಸಿಗುತ್ತದೆಯಲ್ಲ ಎಲ್ಲವನ್ನು ಮುಚ್ಚಬೇಕು. ಮಳೆಯಲ್ಲಿ ಯಾವುದೇ ರೀತಿಯಲ್ಲಿ ಹೆಚ್ಚು-ಕಮ್ಮಿ ಆದಲ್ಲಿ ಅದಕ್ಕೆ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ. ಅಧಿಕಾರಿಗಳು ಬೇಗನೇ ಕೃಯಾಶೀಲರಾಗಬೇಕು ಎಂದು ಸ್ಪೀಕರ್ ತಿಳಿಸಿದರು.