ಅಸ್ಸಾಂ, ಪುದುಚೇರಿ ಜೊತೆಗೆ ಪ. ಬಂಗಾಳದಲ್ಲಿ ಬಿಜೆಪಿಯು ಚರಿತ್ರೆಯ ದಾಖಲೆಯ ಅದ್ಭುತ ಗೆಲುವಿನಿಂದ ಟಿಎಂಸಿಯ ದುರಾಡಳಿತ ಕೊನೆಗೊಂಡಿದೆ: ಶಾಸಕ ಕಾಮತ್ ಹರ್ಷ
Monday, May 4, 2026
ಮಂಗಳೂರು: ಅಸ್ಸಾಂ, ಪುದುಚೇರಿ ಜೊತೆಗೆ ವಿಶೇಷವಾಗಿ ಪ. ಬಂಗಾಳದಲ್ಲಿ ಬಿಜೆಪಿಯು ಚರಿತ್ರೆಯಲ್ಲಿ ದಾಖಲಾಗುವಂತಹ ಅದ್ಭುತ ಗೆಲುವು ಸಾಧಿಸಿದ್ದು ಟಿಎಂಸಿಯ ದುರಾಡಳಿತ ಕೊನೆಗೊಂಡಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಹರ್ಷ ವ್ಯಕ್ತಪಡಿಸಿದರು.
ಟಿಎಂಸಿ ಹಾಗೂ ಕಮ್ಯುನಿಸ್ಟ್ ಎಂಬ ಒಂದೇ ನಾಣ್ಯದ ಎರಡು ಮುಖಗಳು ಬಂಗಾಳದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಮಾರಣಹೋಮ, ಮಿತಿ ಮೀರಿದ ಓಲೈಕೆ, ದೇಶದ ಭದ್ರತೆಗೆ ಸವಾಲು ಇವೆಲ್ಲವೂ ಬಿಜೆಪಿ ಗೆಲುವಿನಿಂದ ಅಂತ್ಯಗೊಂಡಿದೆ. ಭಾರತೀಯ ಜನಸಂಘದ ಸಂಸ್ಥಾಪಕರಾಗಿದ್ದ ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ನಾಡಿನಲ್ಲಿ ಕಮಲ ಅರಳಿರುವುದು ಇಡೀ ದೇಶದ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂದಿದೆ ಎಂದರು.
ಈ ಅಭೂತಪೂರ್ವ ಜಯಕ್ಕೆ ಕಾರಣೀಭೂತರಾದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ನರೇಂದ್ರ ಮೋದಿ, ಅಮಿತ್ ಶಾ, ಸುವೆಂದು ಅಧಿಕಾರಿ ಸಹಿತ ಎಲ್ಲಾ ಬಿಜೆಪಿ ಪ್ರಮುಖರು, ಕಾರ್ಯಕರ್ತರು, ವಿಶೇಷವಾಗಿ ಬಂಗಾಳದ ಜನತೆ ಯಾವುದೇ ಭಯವಿಲ್ಲದೇ ಮತದಾನ ನಡೆಸಲು ಅವಕಾಶ ಮಾಡಿಕೊಟ್ಟ ಭದ್ರತಾ ಪಡೆಗಳಿಗೆ ವಿಶೇಷ ಅಭಿನಂದನೆಗಳು ಎಂದು ಶಾಸಕ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.