ಪಶ್ಚಿಮ ಬಂಗಾಳದಲ್ಲಿ ಅರಳಿದ ಕಮಲ: ಬಿಜೆಪಿ ಮೂಡುಬಿದಿರೆ ಮಂಡಲದಿಂದ ಸಂಭ್ರಮಾಚರಣೆ

ಪಶ್ಚಿಮ ಬಂಗಾಳದಲ್ಲಿ ಅರಳಿದ ಕಮಲ: ಬಿಜೆಪಿ ಮೂಡುಬಿದಿರೆ ಮಂಡಲದಿಂದ ಸಂಭ್ರಮಾಚರಣೆ


ಮೂಡುಬಿದಿರೆ: ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ  ಬಿಜೆಪಿ ಅತ್ಯಧಿಕ ಮತಗಳನ್ನು ಪಡೆದು ಅಧಿಕಾರದ ಗದ್ದುಗೆ ಏರಲು ಅಹ೯ತೆಯನ್ನು ಪಡೆದ ಹಿನ್ನೆಲೆಯಲ್ಲಿ  ಭಾರತೀಯ ಜನತಾ ಪಾರ್ಟಿ ಮುಲ್ಕಿ ಮೂಡುಬಿದಿರೆ ಮಂಡಲದ ವತಿಯಿಂದ ಸೋಮವಾರ ಸಂಜೆ ಮೂಡುಬಿದಿರೆ ಬಸ್ ನಿಲ್ದಾಣದ ಆವರಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. 

ಬಿಜೆಪಿಯ ಹಿರಿಯ ಮುಖಂಡ ಕೆ. ಆರ್. ಪಂಡಿತ್ ಸಂಭ್ರಮಾಚರಣೆಯನ್ನು ಉದ್ದೇಶಿಸಿ ಮಾತನಾಡಿ

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅಧಿಕಾರದ ಅಹಂಕಾರದಿಂದ  ದುರಾಡಳಿತ ನಡೆಸುವ ಮೂಲಕ ಹಿಂದುಗಳು ಬದುಕುವುದೇ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಜನತೆ   ತಕ್ಕ ಪಾಠ ಕಲಿಸುವ ಮೂಲಕ ದೀದಿಯ ಪರಿಸ್ಥಿತಿ ಬೀದಿಗೆ ಬಿದ್ದಂತ್ತಾಗಿದೆ.        

ಮೋದಿ ಮತ್ತು ಅಮಿತ್ ಷಾ ಅವರ ಕಾಯ೯ತಂತ್ರದಿಂದ ಗೆಲುವು ಸಾಧ್ಯವಾಗಿದೆ. ಇವರಿಬ್ಬರ ಮುಂದಿನ ಟಾಗೆ೯ಟ್ ಕೇರಳ ಮತ್ತು ತಮಿಳುನಾಡು ಎಂದ ಅವರು ಕರ್ನಾಟಕದಲ್ಲಿಯೂ ಹಿಂದೂಗಳನ್ನು ಕಡೆಗಣಿಸಿ ಅಲ್ಪ ಸಂಖ್ಯಾತರ ತುಷ್ಟೀಕರಣ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೂ ಇದು ಎಚ್ಚರಿಕೆಯ  ಗಂಟೆಯಾಗಿದೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ, ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಪ್ರಧಾನ ಕಾರ್‍ಯದರ್ಶಿ ರಂಜಿತ್ ಪೂಜಾರಿ, ಕಾಯ೯ದಶಿ೯ ಪ್ರಭಾಕರ ಕುಲಾಲ್, ನಗರಾಧ್ಯಕ್ಷ ಲಕ್ಷ್ಮಣ್ ಪೂಜಾರಿ, ಯುವ ಮೋರ್ಚಾದ ಅಧ್ಯಕ್ಷ ಕುಮಾರ್ ಪ್ರಸಾದ್, ಕಾಯ೯ದಶಿ೯  ಭರತ್ ಶೆಟ್ಟಿ, ಉಪಾಧ್ಯಕ್ಷ ಸಚಿನ್ ಪಣಪಿಲ, ಹಿಂದುಳಿದ ವಗ೯ಗಳ ಉಪಾಧ್ಯಕ್ಷ ಅಶ್ವಥ್ ಪಣಪಿಲ, ಹಾಗೂ ಕಾರ್‍ಯಕರ್ತರು ಪಾಲ್ಗೊಂಡಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article