ಸರ್ಕಾರಿ ಶಾಲಾ ಮಕ್ಕಳಿಗೆ ಮಾದರಿ ಬೇಸಿಗೆ ಶಿಬಿರ ಸಮಾಪನ: ಯುವವಾಹಿನಿ, ವೀಚೀಸ್ ಸಂಸ್ಥೆಯಿಂದ ಆಯೋಜನೆ
Monday, May 4, 2026
ಮೂಡುಬಿದಿರೆ: ಯುವವಾಹಿನಿ ಮೂಡುಬಿದಿರೆ ಘಟಕ ಹಾಗೂ ವೀಚೀಸ್ ಕೌಶಲ್ಯಪರ ತರಬೇತಿ ಕೇಂದ್ರ ಮೂಡುಬಿದಿರೆ ಇವರ ಸಹಯೋಗದಲ್ಲಿ ಮಕ್ಕಳಿಗಾಗಿ ಆಯೋಜಿಸಲಾದ ಒಂದು ವಾರದ ಉಚಿತ ಬೇಸಿಗೆ ಶಿಬಿರವು ಸಮಾಜ ಮಂದಿರದಲ್ಲಿ ಸಂಪನ್ನಗೊಂಡಿತು.
ಯುವ ಸ್ಪಂದನ ಯೋಜನೆಯ ಅಧ್ಯಕ್ಷ ನವಾನಂದ ಅತಿಥಿಯಾಗಿ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಇಂತಹ ಶಿಬಿರಗಳನ್ನು ನಡೆಸುವುದು ಸಮಾಜಕ್ಕೆ ಮಾದರಿಯಾಗಿದೆ. ಇಂತಹ ಅವಕಾಶಗಳು ಹೆಚ್ಚಿನ ವಿದ್ಯಾರ್ಥಿಗಳಿಗೆ ದೊರೆಯಬೇಕು ಎಂದರು.
ಮಂಗಳೂರು ಕೆನರಾ ಬ್ಯಾಂಕ್ ಎಫ್.ಎಲ್.ಸಿ ಪ್ರತಿನಿಧಿ ಲತೇಶ್ ಮಕ್ಕಳಿಗೆ ಹಣಕಾಸು ಸಾಕ್ಷರತೆ ಹಾಗೂ ಸರ್ಕಾರದ ಉಳಿತಾಯ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್,ಪದಾಧಿಕಾರಿಗಳಾದ ಜಯಶೀಲಾ ಎಸ್ ಪೂಜಾರಿ, ಭಾಗ್ಯಶ್ರೀ ಅಂಚನ್, ಸುಮಿತ್ರ ವಿಶ್ವನಾಥ್, ಯೋಗಿತಾ ನವಾನಂದ ಹಾಗೂ ರತ್ನಾವತಿ ಉಪಸ್ಥಿತರಿದ್ದರು.
ಯುವವಾಹಿನಿ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕಿ ಶುಭ ಲಕ್ಷ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.