ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ರಕ್ತದಾನ ಶಿಬಿರ
Sunday, May 10, 2026
ಮಂಗಳೂರು: ಜೆಎಫ್ ಅಶೋಶಿಯೇಷನ್ (ರಿ) ಬಜಾಲ್ ನಂತೂರ್ ಮಂಗಳೂರು ಇದರ ವತಿಯಿಂದ, ಯೆನಾಪೋಯ ಬ್ಲೆಡ್ ಬ್ಯಾಂಕ್ ಸಹಯೋಗದೊಂದಿಗೆ, ಹಾಗೂ ಬ್ಲೆಡ್ ಡೊನೇರ್ಸ್ ಸಹಕಾದೊಂದಿಗೆ (ಮರ್ವೋಮ್ ಬಿ ಪಕ್ರುದ್ದಿನ್ ವೇದಿಕೆ) ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಭಾನುವಾರ ಜೆಎಫ್ ಅಶೋಶಿಯೇಷನ್ (ರಿ) ಇದರ ಅಧ್ಯಕ್ಷ ನಝೀರ್ ಬಜಾಲ್ ನೇತೃತ್ವದಲ್ಲಿ ರಕ್ತದಾನ ಶಿಬಿರ ನಡೆಯಿತು.
ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಮ.ನ.ಪಾ ನಿಕಟಪೂರ್ವ ಸದಸ್ಯರಾದ ಅಬ್ದುಲ್ ರವೂಫ್ ರಕ್ತದಾನ ಮಾಡುಹುದು ಅರೋಗ್ಯ ವಂತ ವ್ಯಕ್ತಿಯ ಕರ್ತವ್ಯವೆಂದು ಭಾವಿಸಿ ರಕ್ತದಾನ ಮಾಡಿದರೆ ರೋಗಗ್ರಾಸ್ಥರು ಮತ್ತು ಗಾಯಗೊಂಡವರನ್ನು ಬದುಕುಳಿಸಲು ಸಾಧ್ಯ ಈ ಬಿಸಿಲಿನಲ್ಲಿ ಯುವಕರು ಬಂದು ರಕ್ತಧಾನ ಮಾಡುಹುದು ಶ್ಲಾಘನೀಯ ಎಂದು ಶಿಬಿರದಲ್ಲಿ ಭಾಗವಹಿಸಿದ ಯುವಕರನ್ನು ಗೌರವದೊಂದಿಗೆ ಶುಭಹಾರೈಸಿದರು.
ಮಂಗಳೂರು ಬ್ಲೆಡ್ ಡೋನಾರ್ಸ್ ನ ಮುಖ್ಯಸ್ಥರು ಸಿದ್ದಿಕ್ ರವರು ಮಾತನಾಡಿ ರಕ್ತಧಾನಿಗಳಿಗೆ ಶುಭ ಹಾರೈಸಿದರು.
ಸುಮಾರು 58 ಯುವಕರು ರಕ್ತದಾನ ಮಾಡಿದರು.
ಯೆನಾಪೋಯ ಬ್ಲೆಡ್ ಬ್ಯಾಂಕ್ ನ ಡಾ. ದೀಪ್ತಿ, ಹಾಜಿ ಬಿ.ಎನ್. ಅಬ್ಬಾಸ್, ಗೌಷಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಝಕ್, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಆಸೀಫ್ ಬಜಾಲ್, ಬಿಜೆಎಂ ಮುಹಝಿನ್ ನಿಸಾರ್ ಹಾಸಿಮಿ, ಮುಸ್ತಫಾ ಕಟ್ಟಾ, ಸಮಿತಿ ಸದಸ್ಯರಾದ ಆಸ್ಪಕ್, ಸಾಕೀರ್, ಯು.ಪಿ. ಥೌಫೀಕ್, ಎಚ್ ಎಸ್ ಮುನೀರ್, ಇಮ್ರಾನ್, ಯು ಪಿ ವಾಸಿಂ, ಅಫೀಜ್, ಹುಸೈನ್, ರಮೀಜ್, ಅರ್ಫಾಕ್, ಎಚ್ ಎಸ್ ತೌಸೀಫ್, ಕಲಂದರ್, ನೌಫಲ್, ಫಾವಾಜ್, ಆರಿಫ್, ಅರ್ಫಾಕ್, ಇಸಾಕ್ ಮತ್ತಿತರರು ಉಪಸ್ಥಿತರಿದ್ದರು.
ಇಕ್ಬಾಲ್ ಅಹಸನಿ ಸ್ವಾಗತಿಸಿದರು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಕೀಜ್ ವಂದಿಸಿದರು.









