ಬೀದಿ ನಾಯಿಗಳ ಕಾಟ: ಭಯದಿಂದ ತರಬೇತಿಗೆ ಹೋಗುತ್ತಿರುವ ಮಕ್ಕಳು

ಬೀದಿ ನಾಯಿಗಳ ಕಾಟ: ಭಯದಿಂದ ತರಬೇತಿಗೆ ಹೋಗುತ್ತಿರುವ ಮಕ್ಕಳು


ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಕುದುರೆ ಸವಾರಿ ತರಬೇತಿ ಕೇಂದ್ರದ ಸುತ್ತಮುತ್ತ ಬೀದಿನಾಯಿಗಳ ಕಾಟ ವಿಪರೀತವಾಗಿದ್ದು ಮಕ್ಕಳು ಭಯದಿಂದಲೇ ತರಬೇತಿ ಪಡೆಯಲು ಹೋಗುತ್ತಿದ್ದಾರೆ. 

ರಸ್ತೆಯಲ್ಲೇ ಬೀಡು ಬಿಟ್ಟಿರುವ ನಾಯಿಗಳು ಪಾದಚಾರಿಗಳು, ಮಕ್ಕಳನ್ನು ಅಟ್ಟಿಸಿಕೊಂಡು ಬರುವುದು ಮಾಮೂಲಿಯಾಗಿದ್ದರೂ ಮನಪಾ ಅಡಳಿತ ಇತ್ತ ಕಣ್ಣು ಬಿಟ್ಟಂತಿಲ್ಲ. ಕದ್ರಿ ಪಾರ್ಕ್, ಕುದುರೆ ಸವಾರಿ ತರಬೇತಿ ಕೇಂದ್ರ, ಬಿಎಸ್‌ಎನ್‌ಎಲ್  ಆವರಣದಲ್ಲಿ ಹತ್ತಾರು ಬೀದಿನಾಯಿಗಳು ನೆಲೆಸಿದ್ದು ಜನರು ಭಯದಿಂದಲೇ ಓಡಾಟ ನಡೆಸುವಂತಾಗಿದೆ. ಮನಪಾ ಅಡಳಿತ ಇನ್ನಾದರೂ ಎಚ್ಚೆತ್ತು ಅನಾಹುತ ನಡೆಯುವ ಮುನ್ನ ಬೀದಿನಾಯಿಗಳನ್ನು ಹಿಡಿಯುವ ಅಥವಾ ಇನ್ನಿತರ ಕ್ರಮ ಜರುಗಿಸಬೇಕಾದ ತುರ್ತು ಅವಶ್ಯಕತೆಯಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article