ಮೂಡುಬಿದಿರೆಯಲ್ಲಿ ಮೇ 8, 9 ಮತ್ತು 10ರಂದು "ಬೃಹತ್ ಹಲಸು ಮೇಳ": ವಿವಿಧ ತಳಿಯ ಹಲಸಿನ ಹಣ್ಣುಗಳು, ವಿವಿಧ ಖಾದ್ಯಗಳು, ಗಿಡಗಳು ಲಭ್ಯ
ಅವರು ಬುಧವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಮೂಡುಬಿದಿರೆಯ ಮುಂಡ್ರುದೆ ಗುತ್ತು ಕೆ.ಅಮರನಾಥ ಶೆಟ್ಟಿ ಸಭಾಂಗಣದ ಕೃಷಿಸಿರಿ ವೇದಿಕೆ, ವಿದ್ಯಾಗಿರಿ ಸಭಾಂಗಣದಲ್ಲಿ ಮೂರು ದಿನಗಳ ಕಾಲ ಈ ಮೇಳ ನಡೆಯಲಿದ್ದು, ಹಲಸಿನ ವೈವಿಧ್ಯಮಯ ಖಾದ್ಯಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿವೆ. ಮೇಳದ ಮೆರುಗನ್ನು ಹೆಚ್ಚಿಸಲು ರಾಜ್ಯದ ವಿವಿಧ ಭಾಗಗಳಿಂದ ನುರಿತ ಮಾರಾಟಗಾರರು ಆಗಮಿಸುತ್ತಿದ್ದು, ವಿಶೇಷ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಹಲಸಿನ ಹಣ್ಣಿನ ಸೋಫ್ಟಿ, ಜಾಮ್, ಉಪ್ಪಿನಕಾಯಿ, ಮಾವಿನ ಹಣ್ಣಿನ ಸ್ವೀಟ್ ಉಪ್ಪಿನಕಾಯಿ, ಹುಣಸೆಹುಳಿ ಚಟ್ನಿ ಸೇರಿದಂತೆ ಹತ್ತಾರು ಬಗೆಯ ತಿಂಡಿ ತಿನಿಸುಗಳು ಲಭ್ಯವಿವೆ.
ಇಷ್ಟೇ ಅಲ್ಲದೆ ಮೇಳದಲ್ಲಿ ಪಾರಂಪರಿಕ ಇಳಕಲ್ ಮತ್ತು ಖಾದಿ ಸೀರೆಗಳು, ಮಣ್ಣಿನ ಆಭರಣಗಳು, ಬಿದಿರಿನ ಉತ್ಪನ್ನಗಳು ಹಾಗೂ ಕರಕುಶಲ ವಸ್ತುಗಳ ಮಳಿಗೆಗಳು ಗ್ರಾಹಕರನ್ನು ಸೆಳೆಯಲಿವೆ. ಕೃಷಿ ಆಸಕ್ತರಿಗಾಗಿ ಹಲಸು, ಮಾವು ಹಾಗೂ ಹೂವಿನ ಗಿಡಗಳ ಮಾರಾಟವೂ ಇರಲಿದೆ. ಮೇಳಕ್ಕೆ ಸಾಂಸ್ಕೃತಿಕ ಕಳೆ ನೀಡಲು ಭಜನಾ ಸಪ್ತಸ್ವರ ಭಜನಾ ಸ್ಪರ್ಧೆ, ವಾಯ್ಸ್ ಆಫ್ ಬೆದ್ರ ಸಂಗೀತ ಸ್ಪರ್ಧೆ ಹಾಗೂ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸಣ್ಣ ಉದ್ಯಮಿಗಳಿಗೆ ಮತ್ತು ಗೃಹ ಉತ್ಪನ್ನ ತಯಾರಕರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಕೇರಳದಿಂದ ಹಲಸಿನ 70 ಖಾದ್ಯಗಳು ಮೇಳದ ವಿಶೇಷ ಆಕರ್ಷಣೆಯಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ಥಳೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸಬೇಕೆಂದು ಸಂಘಟಕಿ ರಮಿತಾ ತಿಳಿಸಿದರು.
ಬೃಹತ್ ಹಲಸು ಮೇಳದ ಯಶಸ್ಸಿಗಾಗಿ ಸ್ಥಳೀಯ ಹಲವಾರು ಪ್ರಮುಖ ಸಂಘ ಸಂಸ್ಥೆಗಳು ಕೈಜೋಡಿಸಿವೆ. ರೋಟರಿ ಕ್ಲಬ್ ಮೂಡುಬಿದಿರೆ, ರೋಟರಿ ಟೆಂಪಲ್ ಟೌನ್ ಮೂಡುಬಿದಿರೆ, ರೋಟರಿ ಮಿಡ್ ಟೌನ್ ಮೂಡುಬಿದಿರೆ, ಇನ್ನರ್ ವ್ಹೀಲ್ ಮೂಡುಬಿದಿರೆ ಹಾಗೂ ಲಯನ್ಸ್ ಕ್ಲಬ್ ಮೂಡುಬಿದಿರೆ ಈ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿವೆ. ಇದರೊಂದಿಗೆ ಯುವವಾಹಿನಿ ಮೂಡುಬಿದಿರೆ ಘಟಕ, ಜವನೆರ್ ಬೆದ್ರ ಫೌಂಡೇಶನ್ ಮೂಡುಬಿದಿರೆ, ನೇತಾಜಿ ಬ್ರಿಗೇಡ್ ಮೂಡುಬಿದಿರೆ ಹಾಗೂ ಬೆದ್ರ ಫ್ರೆಂಡ್ಸ್ ಮೂಡುಬಿದಿರೆ ಸಂಸ್ಥೆಗಳು ಕೂಡಾ ಸಾಥ್ ನೀಡಿವೆ.
ಸರ್ವೋದಯ ಫ್ರೆಂಡ್ಸ್ ಮೂಡುಬಿದಿರೆ, ತ್ರಿಶೂಲ್ ಫ್ರೆಂಡ್ಸ್ ಮೂಡುಬಿದಿರೆ, ಮಾರಿಗುಡಿ ಫ್ರೆಂಡ್ಸ್ ಮೂಡುಬಿದಿರೆ, ದೊಡ್ಡನೆ ಫ್ರೆಂಡ್ಸ್ ಮೂಡುಬಿದಿರೆ, ಪುತ್ತಿಗೆ ಫ್ರೆಂಡ್ಸ್ ಮೂಡುಬಿದಿರೆ ಹಾಗೂ ಬೆಟ್ಟೇರಿ ಫ್ರೆಂಡ್ಸ್ ಮೂಡುಬಿದಿರೆ ಸಂಘಟನೆಗಳು ಮೇಳದೊಂದಿಗೆ ಸಹಕರಿಸುತ್ತಿವೆ. ಕ್ರೀಡಾ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಎಂ ಬಿ ಇಲೆವೆನ್ ಮೂಡುಬಿದಿರೆ, ಫ್ರೆಂಡ್ಸ್ ಇಲೆವೆನ್ ಮೂಡುಬಿದಿರೆ ಹಾಗೂ ಬೋಲ್ಪು ಚಾರಿಟೇಬಲ್ ಟ್ರಸ್ಟ್ ಮೂಡುಬಿದಿರೆ ಸಂಘಟನೆಗಳ ಬೆಂಬಲವೂ ಈ ಮೇಳಕ್ಕಿದೆ.
ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘ ಮೂಡುಬಿದಿರೆ, ನವಚೇತನ ಸೇವಾ ಬಳಗ ಮೂಡುಬಿದಿರೆ, ಬಂಟರ ಸಂಘ ಮಹಿಳಾ ಘಟಕ ಮೂಡುಬಿದಿರೆ ಮತ್ತು ಪ್ರೆಸ್ ಕ್ಲಬ್ ಮೂಡುಬಿದಿರೆ ಸಂಸ್ಥೆಗಳು ಮೇಳಕ್ಕೆ ಅಗತ್ಯವಿರುವ ಸಹಕಾರ ಒದಗಿಸಿವೆ. ಇದಲ್ಲದೆ ಆಟೋ ಡ್ರೈವರ್ಸ್ ಅಸೋಸಿಯೇಷನ್ ಮೂಡುಬಿದಿರೆ, ಮೊಬೈಲ್ ರಿಟೇಲರ್ಸ್ ಮೂಡುಬಿದಿರೆ, ಲಾಡಿ ಫ್ರೆಂಡ್ಸ್ ಮೂಡುಬಿದಿರೆ, ಹೊಸಕನಸು ಸೇವಾ ಟ್ರಸ್ಟ್ ನೆಲ್ಲಂಗಾಡಿ ಹಾಗೂ ನಮೋ ಫ್ರೆಂಡ್ಸ್ ನೆಲ್ಲಂಗಾಡಿ ಸಂಸ್ಥೆಗಳು ಮೇಳದ ಯಶಸ್ಸಿಗಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಸಂಘಟಕರಾದ ಬೆನಕ ಇವೆಂಟ್ಸ್ ಮಾಲಕ ಗಣೇಶ್ ಶೆಟ್ಟಿ ಬಾರ್ಕೂರು, ಪವರ್ ಫ್ರೆಂಡ್ಸ್ ಬೆದ್ರದ ಉಪಾಧ್ಯಕ್ಷ ಜಯಪ್ರಕಾಶ್, ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್, ಜೆಸಿಐ ಮೂಡುಬಿದಿರೆ ಅಧ್ಯಕ್ಷ ಸುಧಾಕರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.