ಶ್ರೀ ಗೋಪಾಲಕೃಷ್ಣ ದೇವಸ್ಥಾನ ಶಕ್ತಿನಗರದ ಪ್ರತಿಷ್ಠಾ ವಾರ್ಷಿಕ ಮಹೋತ್ಸವ
Sunday, May 3, 2026
ಮಂಗಳೂರು: ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ಇತ್ತೀಚೆಗೆ ವೇ.ಮೂ. ಬ್ರಹ್ಮಶ್ರೀ ಉಳಿಯ ಶ್ರೀ ವಿಷ್ಣು ಅಸ್ತ್ರರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗಿತು.
ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಅಂಗವಾಗಿ ಭಜನಾ ನಾಮ ಸಂಕೀರ್ತನೆಯಲ್ಲಿ ವಿಶ್ವ ಕೊಂಕಣಿ ಕೇಂದ್ರದ ಅದ್ಯಕ್ಷರಾದ ಸಿ.ಎ.ನಂದ ಗೋಪಾಲ ಶೆಣೈ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಭಜನಾ ಮಂಗಲೋತ್ಸವದ ನಂತರ ದೇವರಿಗೆ ವಿಶೇಷ ಸೀಯಾಳಭಿಷೇಕ, ಪಂಚಾಮೃತಾಭಿಷೇಕ, ಶ್ರೀ ಗಣಪತಿ ಹವನ, ಚಂಡಿಕಾ ಹವನದ ಪೂರ್ಣಾಹುತಿ ನಡೆದು ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಪಥಮ ಮಕ್ಕಳ ಮೇಳ, ಸರಾಯೂ ಬಾಲ ಯಕ್ಷ ವೃಂದ (ರಿ) ಇವರಿಂದ ನರಕಾಸುರ ಮೋಕ್ಷ ಎಂಬ ಯಕ್ಷಗಾನವು ವರ್ಕಾಡಿ ಶ್ರೀ ರವಿ ಅಲೆವೂರಾಯ ನಿರ್ದೇಶನದಲ್ಲಿ ಮೂಡಿಬಂತು.
ರಾತ್ರಿ ಶ್ರೀ ಗೋಪಾಲ ಕೃಷ್ಣ ದೇವರಿಗೆ ವಿಶೇಷ ರಂಗಪೂಜೆಯೊಂದಿಗೆ ಪ್ರತಿಷ್ಠಾ ಮಹೋತ್ಸವವು ಅದ್ದೂರಿಯಾಗಿ ಮುಗಿಯಿತು. ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಕೆ.ಸಿ. ನಾಕ್, ಟ್ರಸ್ಟಿ ಸಂಜೀತ್ ನಾಕ್, ಅಂಜು ಆಳ್ವ ನಾಕ್, ಗೌರವ ಸಲಹೆಗಾರ ಅನಂತಕೃಷ್ಣ ಭಟ್, ದೈವಜ್ಞ ಸಿ.ವಿ. ಪೊದುವಾಳ್, ರಮೇಶ್ ಕೆ. ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು.












