ನಾಳೆ ನಿಮಿಷಾ ಶೆಣೈ ಭರತ ನಾಟ್ಯ ರಂಗ ಪ್ರವೇಶ
ಮುಖ್ಯ ಅತಿಥಿಗಳಾಗಿ ಉಡುಪಿ ನೃತ್ಯ ನಿಕೇತನ ಕೊಡವೂರು ಇದರ ನಿರ್ದೇಶಕ ಸುಧೀರ್ ಕೊಡವೂರು ಹಾಗೂ ಚಿತ್ರನಟಿ, ಭರತನಾಟ್ಯ ಪಟು ಮಾನಸಿ ಸುಧೀರ್ ಅವರು ಭಾಗವಹಿಸಲಿದ್ದಾರೆ.
ನಟುವಾಂಗ ಹಾಗೂ ನೃತ್ಯ ನಿರ್ದೇಶನ ವಿದ್ಯಾಶ್ರೀ ರಾಧಾಕೃಷ್ಣ, ಗಾಯನ ಶ್ರೀಕಾಂತ್ ಗೋಪಾಲಕೃಷ್ಣನ್ ಚೆನ್ನೈ, ಮೃದಂಗ ವಿನಯ್ ನಾಗರಾಜನ್ ಬೆಂಗಳೂರು, ಕೊಳಲು ನಿತೀಶ್ ಅಮ್ಮಣ್ಣಾಯ ಬೆಂಗಳೂರು, ರಿದಂ ಪ್ಯಾಡ್ ಕಾರ್ತಿಕ್ ವೈಧಾತ್ರಿ ಬೆಂಗಳೂರು ಅವರದ್ದು.
ಗುರು ವಿದ್ಯಾಶ್ರೀ ಅವರ ಶಿಷ್ಯೆಯಾಗಿರುವ ನಿಮಿಷಾ ಶೆಣೈ ಅವರು ನರೇಶ್ ಶೆಣೈ ಹಾಗೂ ಸುಮನ್ ಶೆಣೈ ಅವರ ಪುತ್ರಿ, ಕೆನರಾ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ್ದಾರೆ. ಐದರ ಹರೆಯದಿಂದಲೇ ಭರತನಾಟ್ಯ ಕಲಿಯಲಾರಂಭಿಸಿದವರು. ಅಯೋಧ್ಯೆಯ
ರಾಮಲಲ್ಲಾನ ಪ್ರಾಣಪ್ರತಿಷ್ಠೆ ಸಂದರ್ಭ, ಕೊಡವೂರು ನೃತ್ಯಶಂಕರ, ತಪಸ್ ನೃತ್ಯೋತ್ಸವ, ಸೇರಿದಂತೆ ಹಲವು ಕಡೆಗಳಲ್ಲಿ ನೃತ್ಯ ಪ್ರದರ್ಶನವಿತ್ತಿದ್ದಾರೆ. ಭರತನಾಟ್ಯಂ ಸೀನಿಯರ್ ಗ್ರೇಡ್ ಪರೀಕ್ಷೆಯನ್ನು ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆಯಾಗಿರುವ ನಿಮಿಷಾ ಪ್ರಸ್ತುತ ವಿದ್ವತ್ ಪೂರ್ವ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.