ರಥಬೀದಿಯ ಸರ್ಕಾರಿ ಕಾಲೇಜಿನಲ್ಲಿ “ಗಣಿತದಿಂದ ಲಕ್ಷಾಂತರ ಅವಕಾಶಗಳತ್ತ” ವಿಶೇಷ ಉಪನ್ಯಾಸ

ರಥಬೀದಿಯ ಸರ್ಕಾರಿ ಕಾಲೇಜಿನಲ್ಲಿ “ಗಣಿತದಿಂದ ಲಕ್ಷಾಂತರ ಅವಕಾಶಗಳತ್ತ” ವಿಶೇಷ ಉಪನ್ಯಾಸ


ಮಂಗಳೂರು: ರಥಬೀದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ವತಿಯಿಂದ ಮೇ 8 ರಂದು ಅಕಾಡೆಮಿಕ್ ಬ್ಲಾಕ್–01ರ ಉಪನ್ಯಾಸ ಸಭಾಂಗಣ 213ರಲ್ಲಿ “ಗಣಿತದಿಂದ ಲಕ್ಷಾಂತರ ಅವಕಾಶಗಳತ್ತ” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ರಾಘವೇಂದ್ರ ಎ. ಅವರು “ಗಣಿತದಲ್ಲಿ ಉದ್ಯೋಗಾವಕಾಶಗಳು, ಸೃಜನಶೀಲತೆ ಮತ್ತು ಹೊಸ ಅವಕಾಶಗಳು” ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.


ತಮ್ಮ ಉಪನ್ಯಾಸದಲ್ಲಿ ಅವರು ಗಣಿತಶಾಸ್ತ್ರದ ಮಹತ್ವ ಹಾಗೂ ಇಂದಿನ ಕಾಲದಲ್ಲಿ ಗಣಿತ ಕ್ಷೇತ್ರದಲ್ಲಿ ಲಭ್ಯವಿರುವ ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ಬಗ್ಗೆ ವಿವರಿಸಿದರು. ವಿಶೇಷವಾಗಿ 'JAM' ಮತ್ತು 'JEST' ಪರೀಕ್ಷೆಗಳ ಮೂಲಕ Indian Institutes of Technology, National Institutes of Technology, Indian Institutes of Science Education and Research ಹಾಗೂ Indian Institute of Science ಮುಂತಾದ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಬಹುದಾದ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ Infosys Springboard ಕಾರ್ಯಕ್ರಮ, ವಿವಿಧ ಕೇಂದ್ರ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆಗಳು, ಸಂಶೋಧನಾ ಕ್ಷೇತ್ರಗಳು ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡರು.

ಗಣಿತಶಾಸ್ತ್ರವು ಕೇವಲ ಪಾಠ ವಿಷಯವಲ್ಲ, ಅದು ಸಂಶೋಧನೆ, ನವೀನತೆ, ತಂತ್ರಜ್ಞಾನ ಹಾಗೂ ಅನೇಕ ಉದ್ಯೋಗ ಕ್ಷೇತ್ರಗಳಿಗೆ ದಾರಿ ತೆರೆಸುವ ಶಕ್ತಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ತಮ್ಮ ಆಸಕ್ತಿಯನ್ನು ಬೆಳೆಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸಬೇಕು ಎಂದು ಪ್ರೇರೇಪಿಸಿದರು.

ಕಾರ್ಯಕ್ರಮದಲ್ಲಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮೋಹನ್ ದಾಸ್ ಉಪಸ್ಥಿತರಿದ್ದರು. 

ಪ್ರಥಮ ಬಿ.ಎಸ್‌ಸಿ ವಿದ್ಯಾರ್ಥಿನಿ ಧನ್ಯಾ ಅವರು ಮುಖ್ಯ ಅತಿಥಿಯನ್ನು ಪರಿಚಯಿಸಿದರು. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ತೃತೀಯ ಬಿ.ಎಸ್‌ಸಿ ವಿದ್ಯಾರ್ಥಿ ಶ್ರೀ ಟೈರ್ಸಿಯನ್ ಕ್ಸೂ ಅವರು ವಂದನಾರ್ಪಣೆ ಸಲ್ಲಿಸಿದರು. ಈ ಉಪನ್ಯಾಸ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಹಾಗೂ ಮಾರ್ಗದರ್ಶಕವಾಗಿದ್ದು, ಗಣಿತ ಕ್ಷೇತ್ರದ ಹೊಸ ಅವಕಾಶಗಳ ಕುರಿತು ಅರಿವು ಮೂಡಿಸಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article