ಫಾ.ಮುಲ್ಲರ್‌ನಲ್ಲಿ ವಿಶ್ವ ಕೈ ನೈರ್ಮಲ್ಯ ದಿನ

ಫಾ.ಮುಲ್ಲರ್‌ನಲ್ಲಿ ವಿಶ್ವ ಕೈ ನೈರ್ಮಲ್ಯ ದಿನ


ಮಂಗಳೂರು: ವಿಶ್ವ ಕೈ ನೈರ್ಮಲ್ಯ ದಿನವನ್ನು ನಗರದ ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಯಲ್ಲಿ ಅತ್ಯಂತ ಮಂಗಳವಾರ ಆಚರಿಸಲಾಯಿತು.

ಸಂಸ್ಥೆಯ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಸಮಿತಿ ಹಾಗೂ ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಸಂಯುಕ್ತ ಆಶ್ರಯದಲ್ಲಿ ವಾರ ಪೂರ್ತಿ ನಡೆದ ವಿವಿಧ ಜಾಗೃತಿ ಕಾರ್ಯಕ್ರಮಗಳು ಇದೇ ಸಂದರ್ಭದಲ್ಲಿ ನಡೆದ ಭವ್ಯ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡವು. 

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ವಂ. ಫಾಸ್ಟಿನ್ ಲೂಕಾಸ್ ಲೋಬೋ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಅಂತಃಸ್ರಾವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸುದೀಪ್ ಕೆ. ಭಾಗವಹಿಸಿದ್ದರು. 

ಆಡಳಿತಾಧಿಕಾರಿ ಜಾರ್ಜ್ ಜೀವನ್ ಸಿಕ್ವೇರಾ, ವೈದ್ಯಕೀಯ ಅಧೀಕ್ಷಕ ಡಾ. ಉದಯ್ ಕುಮಾರ್, ಮುಖ್ಯ ನರ್ಸಿಂಗ್ ಅಧಿಕಾರಿ ಭಗಿನಿ ನ್ಯಾನ್ಸಿ ಪ್ರಿಯಾ ಮಥಾಯಿಸ್, ಐಪಿಸಿಸಿ ಅಧ್ಯಕ್ಷರು ಹಾಗೂ ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಥಾಮಸ್ ಎಸ್.ಕೆ., ಪ್ರಮುಖರಾದ ವಂ. ಮೈಕೆಲ್ ಸಾಂತು ಮಯೋರ್, ವಂ. ವಿಲಿಯಂ ಡಿ ಸೋಜ, ವಂ.ರೋಹನ್ ಮೈಕೆಲ್ ಡಿಯಾಸ್, ಡೀನ್ ಡಾ. ಆಂಟನಿ ಸಿಲ್ವನ್ ಡಿ ಸೋಜ ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ವಾರದ ಹಿಂದೆಯೇ ಹಲವು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. 

ವಯೋಲಾ ಥಾಮಸ್ ಮತ್ತು ತಂಡದ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಮೇಘಾ ಕುಲಾಲ್ ಮತ್ತು ಪ್ರೀಮಾ ಮೋನಿಸ್ ನಿರೂಪಿಸಿದರು. ಡಾ. ಪ್ರಸನ್ನ ಎನ್. ಭಟ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article