ಮೂಡುಬಿದಿರೆ: ಕಲ್ಲಮುಂಡ್ಕೂರು ವ್ಯ.ಸೇ. ಸಹಕಾರಿ ಸಂಘದ ನಿದೇ೯ಶಕರ ಚುನಾವಣೆ : ಸತೀಶ್ ಕಲ್ಲಮುಂಡ್ಕೂರು 3ನೇ, ವಸಂತ್ ಭಟ್ 4ನೇ ಬಾರಿ ಆಯ್ಕೆ
Monday, May 18, 2026
ಮೂಡುಬಿದಿರೆ: ಕಲ್ಲಮುಂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ ಐದು ವಷ೯ಗಳ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಹಿಂದುಳಿದ ವಗ೯ 'ಎ'ಕ್ಷೇತ್ರದಿಂದ ಸತೀಶ್ ಕಲ್ಲಮುಂಡ್ಕೂರು ಹಾಗೂ ಸಾಮಾನ್ಯ ಕ್ಷೇತ್ರದಿಂದ ವಸಂತ ಭಟ್ ಆಯ್ಕೆಯಾಗಿದ್ದಾರೆ.
ಒಟ್ಟು 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 10 ಸ್ಥಾನಗಳು ಬಿಜೆಪಿ ಬೆಂಬಲಿತರ ಪಾಲಾಗಿದೆ.
ಸತೀಶ್ ಕಲ್ಲಮುಂಡ್ಕೂರು ಅವರು ಮೂರನೇ ಬಾರಿ ಹಾಗೂ ವಸಂತ್ ಭಟ್ ನಾಲ್ಕನೇ ಬಾರಿಗೆ ನಿದೇ೯ಶಕರಾಗಿ ಆಯ್ಕೆಯಾಗಿದ್ದಾರೆ.