ಪಡುಮಾನಾ೯ಡು ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಸಮಾಪ್ತಿ

ಪಡುಮಾನಾ೯ಡು ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಸಮಾಪ್ತಿ


ಮೂಡುಬಿದಿರೆ: ಪಡುಮಾನಾ೯ಡು ಗ್ರಾ. ಪಂಚಾಯತ್, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಪಡುಮಾನಾ೯ಡು ಇವುಗಳ ಜಂಟಿ ಆಶ್ರಯದಲ್ಲಿ ಅಚ್ಚರಕಟ್ಟೆ ಸ. ಹಿ. ಪ್ರಾ. ಶಾಲೆಯಲ್ಲಿ 5 ದಿನಗಳ ಕಾಲ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವು ಸಮಾಪ್ತಿಗೊಂಡಿತು. 


ಈ ಕಾರ್ಯಕ್ರಮದಲ್ಲಿ  ಪಂಚಾಯತ್ ಆಡಳಿತಧಿಕಾರಿ ಡಾ.ಮಲ್ಲಿಕಾರ್ಜುನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯಿಶ್ ಚೌಟ, ದಾನಿಗಳಾದ ದಯಾನಂದ ಪೈ, ಶಾಲಾ ಮುಖ್ಯ ಶಿಕ್ಷಕಿ ಶಕುಂತಲಾ ಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾದ  ನಾಗಶ್ರೀ, ರಾಜು ಉಪಸ್ಥಿತರಿದ್ದರು. 


ಗ್ರಂಥಾಲಯ ಮೇಲ್ವಿಚಾರಕಿ ವನಿತಾ ವರದಿ ಮಂಡಿಸಿದರು. ಶಿಬಿರದಲ್ಲಿ 38 ಮಕ್ಕಳು ಪಾಲ್ಗೊಂಡಿದ್ದು ಮಕ್ಕಳಿಗೆ , ಸಿರಿ ಆರ್ಟ್ ಕ್ರಿಕೆಟ್, ಬಲೂನ್ ಆಟಗಳನ್ನು ಆಡಿಸಲಾಯಿತು. ಮಕ್ಕಳು ಅನಿಸಿಕೆ,  ಗಂಡು ಮಕ್ಕಳು ಮಾದಕ ದ್ರವ್ಯ ನಿರ್ಮೂಲನೆ ಬಗ್ಗೆ ಸ್ಕಿಟ್ ಹಾಗೂ ಹೆಣ್ಣು ಮಕ್ಕಳು ಹಕ್ಕಿಯ ಹಾರಾಟ, ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಸ್ಕಿಟ್ ಹಾಗೂ ಕೈಗಳ ಸ್ವಚ್ಛತೆ ಯನ್ನು ನೃತ್ಯದ ಮೂಲಕ ಮಾಡಿ ತೋರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ನಂತರ ತುಳಸಿ ನೃತ್ಯ, ಹಾಡು, ಅಭಿನಯ ಗೀತೆ, ಸಂಪ್ರದಾಯ ಉಡುಗೆಗಳಲ್ಲಿ ಫ್ಯಾಷನ್ ಶೋ ಮೂಲಕ ಮಕ್ಕಳು ಮಿಂಚಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.   ಪ್ರತೀಕ್ಷಾ ಸ್ವಾಗತಿಸಿದರು.  ತನ್ವಿ ಕಾಯ೯ಕ್ರಮ ನಿರೂಪಿಸಿದರು.ಮೋಕ್ಷ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article