ಮೂಡುಬಿದಿರೆಯ ಅಭಿವೃದ್ಧಿಗಾಗಿ ಕ್ರಿಯೇಟರ್ಸ್ ಮೀಟ್

ಮೂಡುಬಿದಿರೆಯ ಅಭಿವೃದ್ಧಿಗಾಗಿ ಕ್ರಿಯೇಟರ್ಸ್ ಮೀಟ್


ಮೂಡುಬಿದಿರೆ: ನಮ್ಮ ಮೂಡುಬಿದಿರೆ ಫೋರಂ ವತಿಯಿಂದ ಮೂಡುಬಿದಿರೆಯ ಅರಿಹಂತ್ ಆಹಾರ್ (ಪಾರ್ಟಿ ಹಾಲ್) ನಲ್ಲಿ ಮೂಡುಬಿದಿರೆ ಕ್ರಿಯೇಟರ್ಸ್ ಮೀಟ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅವರು ಮಾತನಾಡಿ, “ಇಂದಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಕ್ಕೆ ಅಪಾರ ಶಕ್ತಿ ಇದೆ. ಅದನ್ನು ಸಮಾಜದ ಒಳಿತಿಗಾಗಿ ಸರಿಯಾದ ರೀತಿಯಲ್ಲಿ ಬಳಸಿಕೊಂಡು ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು” ಎಂದು ಸಲಹೆ ನೀಡಿದರು.


ನಮ್ಮ ಮೂಡುಬಿದಿರೆ ಫೋರಂನ ಅಕ್ಷಯ್ ಕೆ ಜೈನ್ ಅವರು ಮಾತನಾಡಿ “ಯಾರನ್ನೂ ವೈಯಕ್ತಿಕವಾಗಿ ಟಾರ್ಗೆಟ್ ಮಾಡುವುದು ಅಥವಾ ಆರೋಪಿಸುವುದು ನಮ್ಮ ಉದ್ದೇಶವಲ್ಲ. ಸಾಮಾಜಿಕ ಜಾಲತಾಣಗಳನ್ನು ಸರಿಯಾದ ದಾರಿಯಲ್ಲಿ ಬಳಸಿಕೊಂಡು ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿದು, ನಮ್ಮ ಮೂಡುಬಿದಿರೆಯನ್ನು ಎಲ್ಲದರಲ್ಲೂ ಉತ್ತಮವಾಗಿಸಬೇಕು” ಎಂದು ಹೇಳಿದರು.

ಸಾಮಾಜಿಕ ಜಾಗೃತಿ, ಸಾರ್ವಜನಿಕ ಸಮಸ್ಯೆಗಳು ಹಾಗೂ ನಮ್ಮ ಮೂಡುಬಿದಿರೆಯ ಸಕಾರಾತ್ಮಕ ಅಭಿವೃದ್ಧಿ ಕುರಿತ ಚರ್ಚೆ ನಡೆಸುವ ಉದ್ದೇಶದಿಂದ ನಡೆದ ಈ ಸಭೆಯಲ್ಲಿ ಸುಮಾರು 55ಕ್ಕೂ ಹೆಚ್ಚು ಕ್ರಿಯೇಟರ್ಸ್, ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ಸ್, ಮೀಡಿಯಾ ಪ್ರತಿನಿಧಿಗಳು, ಬ್ಲಾಗರ್ಸ್, ರೀಲ್ಸ್ ಮೇಕರ್ಸ್ ಹಾಗೂ ಸ್ವಯಂಸೇವಕರು ಭಾಗವಹಿಸಿ ತಮ್ಮ ಅಮೂಲ್ಯ ಸಲಹೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡರು.

ಸಭೆಯಲ್ಲಿ ಹಲವರು ಸಾರ್ವಜನಿಕ ಸಮಸ್ಯೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಉತ್ತಮ ಸಲಹೆಗಳನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ನಮ್ಮ ಮೂಡುಬಿದಿರೆ ಫೋರಂ ಸದಸ್ಯರಾದ ಅಡ್ವೊಕೇಟ್ ಇರ್ಷಾದ್, ಯಾಸೀರ್ ಹಾಗೂ ಸಂಪತ್ ದೇವಾಡಿಗ ಅವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article