ಗಾಳಿ ಮಳೆ: ಮೂಡುಕೊಣಾಜೆಯಲ್ಲಿ ಕೃಷಿ ಭೂಮಿ, ಆರು ಮನೆಗಳಿಗೆ ಹಾನಿ

ಗಾಳಿ ಮಳೆ: ಮೂಡುಕೊಣಾಜೆಯಲ್ಲಿ ಕೃಷಿ ಭೂಮಿ, ಆರು ಮನೆಗಳಿಗೆ ಹಾನಿ


ಮೂಡುಬಿದಿರೆ: ಮೂಡುಕೊಣಾಜೆ ಗ್ರಾಮದ ಅನೆಗುಡ್ಡೆ ಮತ್ತು ಅಗರಿ ಪ್ರದೇಶದಲ್ಲಿ ಕಳೆದ ರಾತ್ರಿ ಸಂಭವಿಸಿದ ಭಾರೀ ಗಾಳಿ, ಮಳೆಯಿಂದ ಕೃಷಿಭೂಮಿಗೆ ಹಾನಿಯುಂಟಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.


ಸಂತೋಷ್ ಸಲ್ದಾನ, ಲೀನಾ ಸಲ್ದಾನ ಹಾಗೂ ನೊಬರ್ಟ್ ಪಿರೇರಾ ಅವರಿಗೆ ಸೇರಿದ ತೋಟಗಳಿಗೆ ಹಾನಿಯಾಗಿದೆ. ಈ ತೋಟಗಳಿರುವ ಸಾವಿರಕ್ಕೂ ಆಧಿಕ ರಬ್ಬರ್ ಮರ, ಅಡಿಕೆ‌ಮರ ಹಾಗೂ ತೆಂಗಿನ ಮರಗಳು ನಾಶವಾಗಿದೆ. 6 ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. 6 ಮನೆಗಳು, ದನದ ಕೊಟ್ಟಿಗೆ ಹಾಗೂ ರಬ್ಬರ್ ಶೆಡ್  ಗಾಳಿಗೆ ಕುಸಿದು ಹಾನಿಗೊಳಗಾಗಿವೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article