ಡಿಜಿಟಲ್ ಸ್ಕ್ಯಾನ್: ಉತ್ತರ ಭಾರತ ಮೂಲದ ಕಾಮಿ೯ಕರಿಂದ ವಂಚನೆ

ಡಿಜಿಟಲ್ ಸ್ಕ್ಯಾನ್: ಉತ್ತರ ಭಾರತ ಮೂಲದ ಕಾಮಿ೯ಕರಿಂದ ವಂಚನೆ

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂದಲೆ ಕೆಪಿಟಿಸಿಎಲ್‌ನಲ್ಲಿ ಕೆಲಸ ಮಾಡುತ್ತಿರುವ ಉತ್ತರ ಭಾರತ ಮೂಲದ ಕೆಲವು ಕಾರ್ಮಿಕರು ಸ್ಥಳೀಯ ಕ್ಯಾಂಟೀನ್, ಅಂಗಡಿ ಮಾಲೀಕರು ಹಾಗೂ ಇತರ ಸಾರ್ವಜನಿಕರಿಗೆ ಹಣ ಪಾವತಿಯ ಡಿಜಿಟಲ್ ಸ್ಕ್ಯಾನ್ ನೆಪದಲ್ಲಿ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.

ಹಣ ನೀಡುವ ಸಂದರ್ಭದಲ್ಲಿ ಮೊಬೈಲ್ ಮೂಲಕ ಸ್ಕ್ಯಾನ್ ಮಾಡಲಾಗಿದೆ ಎಂದು ಸುಳ್ಳು ಹೇಳಿ, ಹಣ ವರ್ಗಾಯಿಸದೆ ವಂಚನೆ ಎಸಗಲಾಗುತ್ತಿದೆ. ಈ ಕೃತ್ಯ ಪೂಪಾಡಿಕಲ್ಲಿನ ಕ್ಯಾಂಟೀನ್ ಒಂದರಲ್ಲಿ ಬೆಳಕಿಗೆ ಬಂದಿದ್ದು, ಕ್ಯಾಂಟೀನ್‌ ಮಾಲಕರು, ಸ್ಥಳೀಯರು ಮೋಸ‌ ಮಾಡಿದವರನ್ನು ಹಿಡಿದು ಹಣ ವಸೂಲಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಕಡಂದಲೆ ಪರಿಸರದ ಸಾರ್ವಜನಿಕರು ಮತ್ತು ವ್ಯಾಪಾರಿಗಳು ಉತ್ತರ ಭಾರತದಿಂದ ಬಂದು ಕೆಲಸ ಮಾಡುತ್ತಿರುವ ಇಂತಹ ಕಾರ್ಮಿಕರ ಬಗ್ಗೆ ಸೂಕ್ತ ನಿಗಾವಹಿಸಬೇಕಾಗಿ ವಿನಂತಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article