ಶ್ರೀ ಮಹಾವೀರ ಕಾಲೇಜು–ಕೆಸಿಸಿಐ ಮಂಗಳೂರು ನಡುವೆ ಮಹತ್ತರ 'ಎಂಒಯು' ಒಪ್ಪಂದ

ಶ್ರೀ ಮಹಾವೀರ ಕಾಲೇಜು–ಕೆಸಿಸಿಐ ಮಂಗಳೂರು ನಡುವೆ ಮಹತ್ತರ 'ಎಂಒಯು' ಒಪ್ಪಂದ


ಮೂಡುಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಮತ್ತು ಕೆನರಾ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಮಂಗಳೂರು ಇವುಗಳ ನಡುವೆ ಮಹತ್ವದ ಶೈಕ್ಷಣಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.  

ಈ ಒಪ್ಪಂದದ ಮೂಲಕ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ದಿಯ ತರಬೇತಿಯ ಜೊತೆ ಪ್ರಸ್ತುತ ಔದ್ಯೋಗಿಕ ಕ್ಷೇತ್ರದ ಸವಾಲುಗಳನ್ನು ಎದುರಿಸಲು ಸೂಕ್ತವಾದ ತರಬೇತಿ ನೀಡಲು ಕೆಸಿಸಿಐ ಸಹಕಾರ ನೀಡುವುದು ಎಂಬುದಾಗಿ ಕೆಸಿಸಿಐನ ಅಧ್ಯಕ್ಷ ಪಿ.ಬಿ. ಅಹಮದ್ ಮುದಾಸರ್ ತಿಳಿಸಿದರು.

ಕೆಸಿಸಿಐನ ಬೆಂಬಲದೊಂದಿಗೆ ಮಹಾವೀರ ಕಾಲೇಜಿನ ವಿದ್ಯಾರ್ಥಿಗಳಿಗೆ ಉನ್ನತಮಟ್ಟದ ಕೌಶಲ್ಯ ತರಬೇತಿ ನೀಡುವುದರ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಅವರನ್ನು ಸಿದ್ಧಪಡಿಸಲಾಗುವುದು ಎಂಬುದಾಗಿ ಮಹಾವೀರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ  ಕೆ.ಅಭಯಚಂದ್ರ ಜೈನ್ ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಮಾತನಾಡಿ, ಈ ಒಪ್ಪಂದವು ಮಹಾವೀರ ಕಾಲೇಜಿನ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಪಡಿಸಿ ಹೆಚ್ಚಿನ ಉದ್ಯೋಗವಕಾಶವನ್ನು ಸೃಷ್ಥಿಸುವ ಹಾಗೂ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಫ್, ಕೈಗಾರಿಕಾ ಭೇಟಿ ಮೂಲಕ ಪ್ರಾಯೋಗಿಕ ಅವಕಾಶಗಳನ್ನು ನೀಡುವ ಉದ್ದೇಶವನ್ನು ಹೊಂದಿದೆ.  ಮಾತ್ರವಲ್ಲದೆ ಕೆಸಿಸಿಐಯ ಸಹಯೋಗದೊಂದಿಗೆ ಅಲ್ಪಾವಧಿ ಸರ್ಟಿಫಿಕೇಟ್ ಕೋರ್ಸ್, ಕಾರ್ಯಾಗಾರ, ಅತಿಥಿ ಉಪನ್ಯಾಸ ಇತ್ಯಾದಿಗಳನ್ನು ಉಪನ್ಯಾಸಕ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಯೋಜಿಸಲಾಗುವುದು ಎಂದರು ಹಾಗೂ ಈ  ಶೈಕ್ಷಣಿಕ ಒಪ್ಪಂದಕ್ಕೆ ಅನುವು ಮಾಡಿಕೊಟ್ಟ ಕೆಸಿಸಿಐಯ ಅಧ್ಯಕ್ಷರಿಗೆ ಮತ್ತು ನಿರ್ದೇಶಕರಿಗೆ ಧನ್ಯವಾದಗಳನ್ನು ಸಲ್ಲಿಸಿದರು. 

ಈ ಸಂದರ್ಭದಲ್ಲಿ ಕೆಸಿಸಿಐ ಉಪಾಧ್ಯಕ್ಷ ದಿವಾಕರ್ ಪೈ ಕೋಚಿಕಾರ್, ಪೂರ್ವ ಅಧ್ಯಕ್ಷ ಆನಂದ್ ಜಿ. ಪೈ, ಗೌರವ ಕಾರ್ಯದರ್ಶಿ ಅಶ್ವಿನಿ ಪೈ ಮಾರೂರು, ನಿರ್ದೇಶಕ ವಿನ್ಸೆಂಟ್ ಕುಟಿನ್ಹಾ, ಮುಖ್ಯ ಕಾರ್ಯ ನಿರ್ವಾಹಣ ಅಧಿಕಾರಿ ಮೈತ್ರೇಯ ಎ., ಮಹಾವೀರ ಕಾಲೇಜಿನ ವಾಣಿಜ್ಯ ವಿಭಾಗ ಮುಖ್ಯಸ್ಥ ಪ್ರೊ. ಹರೀಶ್, ಕಾಲೇಜಿನ ಹಳೆ ವಿದ್ಯಾರ್ಥಿ ಸಿಎ ಆದರ್ಶ ಶೆಣೈ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article