ರಾ.ಹೆ. ಲೋಪ ದೋಷ: ಪ್ರತಿಭಟನೆಯಿಂದ ಹಿಂದಕ್ಕೆ ಸರಿದ ಬನ್ನಡ್ಕದ ನಾಗರಿಕ ವೇದಿಕೆ
Saturday, May 30, 2026
ಮೂಡುಬಿದಿರೆ: ರಾಷ್ಟ್ರಿಯ ಹೆದ್ದಾರಿಯ ಲೋಪ ದೋಷ ಮತ್ತು ಸರ್ವಿಸ್ ರಸ್ತೆ ಇದರ ಬಗ್ಗೆ ಮೇ. 31ರಂದು ನಾಗರಿಕ ವೇದಿಕೆ ಹಮ್ಮಿಕೊಂಡಿದ್ದ ಪ್ರತಿಭಟನೆಯಿಂದ ಹಿಂದಕ್ಕೆ ಸರಿದಿದೆ.
ವೇದಿಕೆಯು ಶನಿವಾರ ಸಂಜೆ ನಡೆಸಿದ ಸಭೆಯಲ್ಲಿ ಸರ್ವಿಸ್ ರಸ್ತೆ ನಿಮಾ೯ಣದ ಬಗ್ಗೆ ಮುಂದಿನ ಶನಿವಾರದೊಳಗಡೆ ಸಂಸದರು, ಶಾಸಕರು ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಬಂದು ಸಮಸ್ಯೆಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ನಾಗರಿಕ ವೇದಿಕೆಯು ತಾತ್ಕಾಲಿಕವಾಗಿ ಪ್ರತಿಭಟನೆಯಿಂದ ಹಿಂದಕ್ಕೆ ಸರಿದಿದೆ.