ಮೂಡುಬಿದಿರೆಯಲ್ಲಿ ಸಿಐಟಿಯುನಿಂದ ಕಾಮಿ೯ಕ ಅಂತರಾಷ್ಟ್ರೀಯ ದಿನ ಆಚರಣೆ

ಮೂಡುಬಿದಿರೆಯಲ್ಲಿ ಸಿಐಟಿಯುನಿಂದ ಕಾಮಿ೯ಕ ಅಂತರಾಷ್ಟ್ರೀಯ ದಿನ ಆಚರಣೆ


ಮೂಡುಬಿದಿರೆ: ಮೇ ಡೇ ಆಚರಣಾ ಸಮಿತಿಯ ವತಿಯಿಂದ ಸಿಐಟಿಯು ನೇತೃತ್ವದಲ್ಲಿ ಕಾಮಿ೯ಕ ಅಂತರ್ ರಾಷ್ಟ್ರೀಯ ದಿನವನ್ನು ಶುಕ್ರವಾರ ಆಚರಿಸಲಾಯಿತು. 


ಸಾಮ್ರಾಜ್ಯ ಯುದ್ಧಕೋರ ನೀತಿ, ಎಂಟು ಗಂಟೆಯ ಕೆಲಸ ಕಾಮಿ೯ಕರ ಹಕ್ಕು ಅದನ್ನು ಕಸಿಯಲು ಬಿಡುವುದಿಲ್ಲ, ಕಾಮಿ೯ಕ ವಿರೋಧಿ ಸಂಹಿತೆಯನ್ನು ವೀರೋಧಿಸುವೆವು ಮತ್ತು ಕನಿಷ್ಠ ಕೂಲಿಯನ್ನು ಪರಿಷ್ಕರಿಸಲು ಒತ್ತಾಯಿಸಿ ಮೂಡುಬಿದಿರೆ ತಹಶೀಲ್ದಾರ್ ಕಛೇರಿಯ ಮುಂಭಾಗ ಸಾವ೯ಜನಿಕ ಸಭೆ ನಡೆಯಿತು. 


ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಯಾದವ ಶೆಟ್ಟಿ ಅವರು, ತರಕಾರಿ, ಮೀನು, ಮಾಂಸ ಸಹಿತ ಇತರ ದಿನಸಿ ವಸ್ತುಗಳಿಗೆ ದಿನದಿಂದ ದಿನಕ್ಕೆ ಬೆಲೆ ಜಾಸ್ತಿಯಾಗುತ್ತಿದ್ದು ಇದರಿಂದಾಗಿ ಸಾಮಾನ್ಯ ಜನರು ಬದುಕಲು ಕಷ್ಟ ಸಾಧ್ಯವಾಗಿದೆ. ಬೀಡಿ, ಬಿಸಿಯೂಟ ಹಾಗೂ ಇತರ ಕಾಮಿ೯ಕ ವಗ೯ದಲ್ಲಿ ದುಡಿಯುವವರಿಗೆ ವೇತನ ಸಿಗಬೇಕು ಅದಕ್ಕಾಗಿ ತಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು. 

ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ,  ಸಿಐಟಿಯು ಮೂಡುಬಿದಿರೆ ಸಂಘಟನೆಯ ಕಾಯ೯ದಶಿ೯ ರಾಧ, ಉಪಾಧ್ಯಕ್ಷೆ ಗಿರಿಜಾ, ಜತೆ ಕಾಯ೯ದಶಿ೯ ಲಕ್ಷ್ಮೀ, ಕಟ್ಟಡ ಕಾಮಿ೯ಕರ ಸಂಘದ ಉಪಾಧ್ಯಕ್ಷ ಜಯಾನಂದ ಮಾರೂರು, ಬಿಸಿಯೂಟ ಸಂಘದ ಮೂಡುಬಿದಿರೆ ತಾಲೂಕು ಅಧ್ಯಕ್ಷೆ ಶೋಭಾ ಮತ್ತಿತರರು ಈ ಸಂದಭ೯ದಲ್ಲಿದ್ದರು.

 ಕೃಷ್ಣಪ್ಪ ಕಾಯ೯ಕ್ರಮ ನಿರೂಪಿಸಿದರು. 

ಇದಕ್ಕೂ ಮೊದಲು ಮೂಡುಬಿದಿರೆ ಸಿಐಟಿಯು ಕಛೇರಿಯಿಂದ ತಾಲೂಕು ಕಛೇರಿ ವರೆಗೆ ಕಾಮಿ೯ಕ ವಗ೯ದಿಂದ ಆಕಷ೯ಕ ಮೆರವಣಿಗೆ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article