ಶ್ರೀ ಮಹಾವೀರ ಕಾಲೇಜಿನಲ್ಲಿ ಎನ್‌ಸಿಸಿ ತರಬೇತಿ ಶಿಬಿರ

ಶ್ರೀ ಮಹಾವೀರ ಕಾಲೇಜಿನಲ್ಲಿ ಎನ್‌ಸಿಸಿ ತರಬೇತಿ ಶಿಬಿರ


ಮೂಡುಬಿದಿರೆ: 18 ಕನಾ೯ಟಕ ಬೆಟಾಲಿಯನ್ ಎನ್‌ಸಿಸಿ ವತಿಯಿಂದ ಶ್ರೀ ಮಹಾವೀರ ಕಾಲೇಜಿನಲ್ಲಿ ಆಯೋಜಿಸಲಾದ ಕಂಬೈನ್ಡ್ ಆನ್ಯುವಲ್ ಟ್ರೈನಿಂಗ್ ಕ್ಯಾಂಪ್‌ಗೆ ಲೆ.ಕ. ಲೋಹಿತ್ ಪ್ರಕಾಶ್ ರೈ ಚಾಲನೆ ನೀಡಿದರು.


ಬಳಿಕ ಅವರು ಮಾತನಾಡಿ, ಶಿಸ್ತು, ಏಕತೆ, ಸಮಪ೯ಣೆ ಹಾಗೂ ವ್ಯಕ್ತಿತ್ವ ನಿಮಾ೯ಣದ ಮಹತ್ವವನ್ನು ತಿಳಿಸಿ, ಶಿಬಿರದಲ್ಲಿ ಲಭ್ಯವಾಗುವ ತರಬೇತಿ ಮತ್ತು ಅವಕಾಶಗಳನ್ನು ಸಮಪ೯ಕವಾಗಿ ಬಳಸಿಕೊಳ್ಳುವಂತೆ ಕರೆ ನೀಡಿದರು.


ಶಿಬಿರದಲ್ಲಿ ಒಟ್ಟು 580 ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸುತ್ತಲಿದ್ದು ನಾಯಕತ್ವ ಗುಣಗಳು, ಶಿಸ್ತು, ತಂಡ ಭಾವನೆ ಹಾಗೂ ರಾಷ್ಟ್ರ ಸೇವೆಯ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ವಿವಿಧ ಸಮಗ್ರ ತರಬೇತಿ ಕಾಯ೯ಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.


ಲೆ.ಕ. ನಿತಿನ್ ನಾರಾಯಣ್, ಸುಬೇದಾರ್ ಮೇಜರ್ ಯಾಮ್ ಬಹಾದೂರ್ ರಾಣಾ ಮಾತನಾಡಿ, ಶಿಬಿರದ ಎಲ್ಲಾ ಚಟುವಟಿಕೆಗಳಲ್ಲಿ ಉತ್ಸಾಹ ಮತ್ತು ಬದ್ಧತೆಯಿಂದ ಭಾಗವಹಿಸುವಂತೆ ಕೆಡೆಟ್‌ಗಳಿಗೆ ಪ್ರೇರಣೆ ನೀಡಿದರು.


ಶಿಬಿರದ ಯಶಸ್ವಿ ನಿವ೯ಹಣೆಗೆ 18 ಪಿಐ ಸಿಬ್ಬಂದಿ, 1 ಜೆಸಿಐ, 8 ಎಎನ್‌ಓ ಹಾಗೂ 8 ಮಂನಾಗರಿಕ ಸಿಬಂದಿ ಸದಸ್ಯರು ಕಾಯ೯ನಿವ೯ಹಿಸುತ್ತಿದ್ದು ಶಿಬಿರದ ಅವಧಿಯಡಿ ಎಲ್ಲ ತರಬೇತಿ ಹಾಗೂ ಆಡಳಿತಾತ್ಮಕ ಚಟುವಟಿಕೆಗಳನ್ನು ಸುಗಮವಾಗಿ ನಡೆಸಲು ಸಹಕರಿಸುತ್ತಿರುವ ಅವರನ್ನು ಅಭಿನಂದಿಸಲಾಯಿತು.

ಎನ್‌ಸಿಸಿ ಗ್ರೂಪ್ ಹೆಡ್ ಕ್ವಾಟ೯ಸ್೯ ಮಂಗಳೂರು ಗ್ರೂಪ್ ಕಮಾಂಡರ್ ಕನ೯ಲ್ ವಿರಾಜ್ ಕಾಮತ್ ಶಿಬಿರಕ್ಕೆ ಅಧಿಕೃತ ಭೇಟಿ ನೀಡಿದ ಸಂದಭ೯ದಲ್ಲಿ ಎನ್‌ಸಿಸಿ ಕೆಡೆಟ್ಸ್ ಗೌರವ ಪೂವ೯ಕ ಸ್ವಾಗತ ನೀಡಿದರು.

ಶಿಬಿರ ವಿವಿಧ ಚಟುವಟಿಕೆಗಳಾದ ಫೈರಿಂಗ್ ರೇಂಜ್, ಡ್ರೋನ್ ಸಿಮ್ಯುಲೇಟರ್, ಮೆಸ್, ವಸತಿ ನಿಲಯ, ಡ್ರಿಲ್ ಮೈದಾನ, ಆಡಳಿತ ಕಛೇರಿ, ಉಪನ್ಯಾಸ ಸಭಾಂಗಣಗಳು ಹಾಗೂ ಇತರೆ ಅಗತ್ಯ ಮೂಲಭೂತ ಸೌಕಯ೯ಗಳು ಒಳಗೊಂಡಿರುವುದನ್ನು ಪರಿಶೀಲಿಸಿ ಪ್ರಶಂಸಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article