ಶ್ರೀರಾಮ ಮಂದಿರ ಬ್ರಹ್ಮಕಲಶೋತ್ಸವ: ವಿವಿಧ ಕಲಾ ತಂಡಗಳೊಂದಿಗೆ ವೈಭವದ ಹೊರೆಕಾಣಿಕೆ ಮೆರವಣಿಗೆ
Tuesday, May 5, 2026
ಮೂಡುಬಿದಿರೆ: ಇಲ್ಲಿನ ಶ್ರೀ ರಾಮಪುರ ಗೌರಿಕೆರೆಯ ದೇವಾಡಿಗರ ಸುಧಾರಕ ಸಂಘದ ಆಡಳಿತಕ್ಕೊಳಪಟ್ಟ ಶ್ರೀ ರಾಮ ಮಂದಿರದಲ್ಲಿ ಮೇ 6 ರಿಂದ 10ರವರೆಗೆ ಸಪರಿವಾರ ಶ್ರೀರಾಮ ದೇವರ ಬಿಂಬ ಪುನರ್ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಪೂರ್ವಭಾವಿಯಾಗಿ ಮಂಗಳವಾರ ಸಾಯಂಕಾಲ ವಿವಿಧ ಕಲಾ ತಂಡಗಳೊಂದಿಗೆ ಹೊರೆಕಾಣಿಕೆ ಮೆರವಣಿಗೆ ವೈಭವದಿಂದ ನಡೆಯಿತು.
ಮೂಡುಬಿದಿರೆ ಸ್ವರಾಜ್ಯ ಮೈದಾನದಿಂದ ಶ್ರೀ ಕ್ಷೇತ್ರಕ್ಕೆ ಹೊರಟ ಹೊರೆಕಾಣಿಕೆ ಮೆರವಣಿಗೆಗೆ ಚೌಟರ ಅರಮನೆಯ ಕುಲದೀಪ್ ಎಂ. ಚಾಲನೆ ನೀಡಿದರು.
ವಿಶ್ವ ದೇವಾಡಿಗರ ಮಹಾಮಂಡಲದ ಅಧ್ಯಕ್ಷ ಧರ್ಮಪಾಲ, ಜೀರ್ಣೋದ್ಧಾರ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಪುರಂದರ ದೇವಾಡಿಗ, ಕಾರ್ಯಾಧ್ಯಕ್ಷರಾದ ವಿಶ್ವನಾಥ ಪಿ.ದೇವಾಡಿಗ, ಶಶಿಧರ್ ಎಸ್.ದೇವಾಡಿಗ, ಮುಂಬೈ ದೇವಾಡಿಗರ ಸಂಘದ ಅಧ್ಯಕ್ಷ ರವಿ ಶೇರಿಗಾರ್, ಏಕನಾಥೇಶ್ವರ ಟ್ರಸ್ಟ್ ಸದಸ್ಯ ಮೋಹನದಾಸ್ ಹಿರಿಯಡ್ಕ, ವಿವಿಧ ಸಮಿತಿ ಹಾಗೂ ದೇವಾಡಿಗರ ಸಂಘದ ಪದಾಧಿಕಾರಿಗಳು, ಮತ್ತಿತರರು ಈ ಸಂದಭ೯ದಲ್ಲಿದ್ದರು.





