ಅಂತರ ಕಾಲೇಜು ಸಾಫ್ಟ್ ಬಾಲ್ ಪಂದ್ಯಾಟ: ಮಹಿಳಾ ವಿಭಾಗದಲ್ಲಿ‌ ಆಳ್ವಾಸ್, ಪುರುಷರ ವಿಭಾಗದಲ್ಲಿ ಶ್ರೀ ಮಹಾವೀರ ಕಾಲೇಜು ಪ್ರಥಮ

ಅಂತರ ಕಾಲೇಜು ಸಾಫ್ಟ್ ಬಾಲ್ ಪಂದ್ಯಾಟ: ಮಹಿಳಾ ವಿಭಾಗದಲ್ಲಿ‌ ಆಳ್ವಾಸ್, ಪುರುಷರ ವಿಭಾಗದಲ್ಲಿ ಶ್ರೀ ಮಹಾವೀರ ಕಾಲೇಜು ಪ್ರಥಮ


ಮೂಡುಬಿದಿರೆ: ಮಂಗಳೂರು ವಿವಿ ಹಾಗೂ ವಿಶ್ವವಿದ್ಯಾನಿಲಯ ಕಾಲೇಜು ಬನ್ನಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಹಾವೀರ ಕಾಲೇಜು ಮೈದಾನದಲ್ಲಿ ನಡೆದ ಅಂತರ ಕಾಲೇಜು ಸಾಫ್ಟ್ ಬಾಲ್ ಪಂದ್ಯಾಟದಲ್ಲಿ ಮಹಿಳಾ ವಿಭಾಗ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಮತ್ತು ಪುರುಷರ ವಿಭಾಗದಲ್ಲಿ ಶ್ರೀ ಮಹಾವೀರ ಕಾಲೇಜು ಪ್ರಥಮ ಬಹುಮಾನವನ್ನು ಪಡೆದುಕೊಂಡಿದೆ.


ಮಹಿಳೆಯರ ವಿಭಾಗದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು ಬನ್ನಡ್ಕ ದ್ವಿತೀಯ ತೃತೀಯ ಸ್ಥಾನವನ್ನು, ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. 

ಪುರುಷರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು, ತೃತೀಯ ಸ್ಥಾನವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿ ಗಳಿಸಿಕೊಂಡಿದೆ. 

 ವೈಯಕ್ತಿಕ ಪ್ರಶಸ್ತಿಗಳು (ಮಹಿಳಾ ವಿಭಾಗ): 

ಅತ್ಯುತ್ತಮ ಪಿಚರ್: ಜನನಿ (ಆಳ್ವಾಸ್ ಕಾಲೇಜು). ಅತ್ಯುತ್ತಮ ಕ್ಯಾಚರ್: ಸಂಗೀತ (ಬನ್ನಡ್ಕ ಕಾಲೇಜು). ಉತ್ತಮ ಬ್ಯಾಟರ್: ನಳಿನಾಕ್ಷಿ (ಆಳ್ವಾಸ್ ಕಾಲೇಜು). ಸರಣಿ ಶ್ರೇಷ್ಠ ಆಟಗಾರ್ತಿ: ಶರಣ್ಯ ಪುತ್ರಾಯ (ಎಂ.ಪಿ.ಎಂ. ಕಾಲೇಜು ಕಾರ್ಕಳ).

ಪುರುಷರ ವಿಭಾಗದ ವೈಯಕ್ತಿಕ ಪ್ರಶಸ್ತಿಗಳು:

ಅತ್ಯುತ್ತಮ ಪಿಚ್ಚರ್: ಶಶಿಧರ್ (ಶ್ರೀ ಮಹಾವೀರ ಕಾಲೇಜು). ಅತ್ಯುತ್ತಮ ಕ್ಯಾಚರ್: ಪವನ್ (ವಾಮದಪದವು). ಉತ್ತಮ ಬ್ಯಾಟರ್: ಪವನ್ ಕುಮಾರ್ (ಬೆಳ್ತಂಗಡಿ). ಸರಣಿ ಶ್ರೇಷ್ಠ ಆಟಗಾರನಾಗಿ ಅಭಿಶ್ರಿತ್ (ಮಹಾವೀರ ಕಾಲೇಜು) ಮೂಡಿ ಬಂದರು.

ಸಮಾರೋಪ ಸಮಾರಂಭದಲ್ಲಿ ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರಾಧಾಕೃಷ್ಣ ಹೆಚ್.ಬಿ. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದರು. 

ಬನ್ನಡ್ಕ ವಿಶ್ವವಿದ್ಯಾನಿಲಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರತ್ನಾಕರ ಪುತ್ರಾಯ  ಅಧ್ಯಕ್ಷತೆ ವಹಿಸಿದ್ದರು. 

ಇದೇ ಸಂದರ್ಭದಲ್ಲಿ ವಿಶ್ವಕಪ್ ಕಬಡ್ಡಿ ವಿಜೇತ ಆಟಗಾರ್ತಿ ಧನಲಕ್ಷ್ಮಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಕಾರ್ಕಳದ ಎಂ.ಪಿ.ಎಂ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಜಯಭಾರತಿ ಉಪಸ್ಥಿತರಿದ್ದರು.

ಉಪನ್ಯಾಸಕರಾದ ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article